ಕಾಸರಗೋಡು: ಆಹಾರ ಗಂಟಲಲ್ಲಿ ಸಿಲುಕಿ ಬಾಲಕ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಕುಂಡಂಕುಳಿ ನಿವಾಸಿ ಸಿದ್ದಿಕ್ ಸಖಾಫಿಯವರ ಪುತ್ರ ಇಬ್ರಾಹಿಂ ಬಾತಿಷ (9) ಮೃತಪಟ್ಟ ದುರ್ದೈವಿಯಾಗಿದ್ದಾನೆ. ನಿನ್ನೆ ಸಂಜೆ ಮನೆಯಲ್ಲಿ ಆಹಾರ ಸೇವಿಸತ್ತಿದ್ದಾಗ ಗಂಟಲಲ್ಲಿ ಸಿಲುಕಿ ಬಾಲಕನಿಗೆ ಉಸಿರಾಟ ಸಮಸ್ಯೆ ಉಂಟಾಗಿತ್ತೆನ್ನ ಲಾಗಿದೆ. ಇದು ಗಮನಕ್ಕೆ ಬಂದ ತಕ್ಷಣ ಮನೆಯವರು ಬಾಲಕನನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಇಬ್ರಾಹಿಂ ಬಾತಿಷ ಬಡ್ಸ್ ಶಾಲೆ ವಿದ್ಯಾರ್ಥಿಯಾಗಿದ್ದಾನೆ.







