ನಾಡಿನಾದ್ಯಂತ ಗಣೇಶ ಚತುರ್ಥಿ ಆಚರಣೆ

ಕಾಸರಗೋಡು: ನಾಡಿನಾದ್ಯಂತ ಇಂದು ಗಣೇಶ ಚತುರ್ಥಿ ಹಬ್ಬವನ್ನು  ಭಕ್ತಿ ಸಡಗರದೊಂದಿಗೆ ಸಂಭ್ರಮ ದಿಂದ ಆಚರಿಸಲಾಗುತ್ತಿದೆ. ವಿವಿಧ ದೇವಾಲಯ,  ತರವಾಡು ಕ್ಷೇತ್ರಗ ಳಲ್ಲಿ ಗಣೇಶೋತ್ಸವ ಆಚರಿಸಲಾ ಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಪ್ರಧಾನವಾಗಿ  ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರ, ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರ, ಮುಳ್ಳೇರಿಯ ಗಣೇಶ ಕಲಾ ಮಂದಿರ,  ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರ, ಬಾಡೂರು ಶ್ರೀಕೃಷ್ಣ ಭಜನಾ ಮಂದಿರ, ಬದಿಯಡ್ಕ ಗಣೇಶ ಮಂದಿರ, ಬೆಳ್ಳೂರು ನಾಟೆಕಲ್ಲು ಶ್ರೀ ಅಯ್ಯಪ್ಪ ಭಜನಾ ಮಂದಿರ, ಪೆರ್ಲ ಶ್ರೀ ಸತ್ಯನಾರಾಯಣ ಮಂದಿರ, ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರ , ಸೂರ್ಲು ಶ್ರೀ ಗಣೇಶ ಭಜನಾ ಮಂದಿರ ಸಹಿತ ಹಲವೆಡೆ ಗಳಲ್ಲಿ ಸಾರ್ವಜನಿಕ ಶ್ರೀ ಗಣೇಶೋ ತ್ಸವವನ್ನು ಆಚರಿಸಲಾಗುತ್ತಿದೆ.  ಗಣೇಶ ಚತುರ್ಥಿ ಆಚರಣೆಯಂಗವಾಗಿ ಇಂದು ಕಾಸರಗೋಡು ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸರಕಾರ ಪ್ರಾದೇಶಿಕ ರಜೆ ನೀಡಿರುತ್ತದೆ. ಇದೇ ವೇಳೆ ಈ ಹಿಂದೆ ನಿರ್ಧರಿಸಲಾದ ವಿಶ್ವವಿದ್ಯಾನಿಲಯ ಪರೀಕ್ಷೆಗಳು, ಶಾಲಾ ಬೋರ್ಡ್ ಪರೀಕ್ಷೆಗಳು ಸಹಿತ ವಿವಿಧ ನೇಮಕಾತಿಗಿರುವ ಪರೀಕ್ಷೆಗಳಿಗೆ ಇಂದಿನ ರಜೆ ಅನ್ವಯವಲ್ಲವೆಂದು ಜಿಲ್ಲಾಧಿಕಾರಿ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

You cannot copy contents of this page