ಲೋಕಸಭಾ ಚುನಾವಣೆ: ಸಿಪಿಎಂ ಉಮೇದ್ವಾರ ನಿರ್ಣಯ ಸಭೆ ೧೬ರಂದು
ತಿರುವನಂತಪುರ: ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭ ಗೊಂಡಿರುವಂತೆಯೇ ಚುನಾವಣೆ ಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಿರ್ಣಯ ನಾಳೆ ನಡೆಯ ಲಿರುವ ಸಿಪಿಎಂ ರಾಜ್ಯ ಸೆಕ್ರೆಟರಿ ಯೇಟ್ ಸಭೆಯಲ್ಲಿ ಕೈಗೊಳ್ಳಲಾಗು ವುದು. ಲೋಕಸಭಾ ಚುನಾವಣೆಯಲ್ಲಿ ಎಷ್ಟು ಶಾಸಕರು ಸ್ಪರ್ಧಿಸಬೇಕು, ಎಷ್ಟರ ಮಟ್ಟಿನ ಮಹಿಳಾ ಪ್ರಾತಿನಿಧ್ಯ ನೀಡಬೇಕು ಇತ್ಯಾದಿ ವಿಷಯಗಳ ಬಗ್ಗೆಯೂ ಸಭೆ ಚರ್ಚಿಸಿ ಸಭೆ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಲೋಕಸಭಾ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂಬ ಬೇಡಿಕೆಯೂ ಪಕ್ಷದೊಳಗೆ ಒಂದೆಡೆ ಉಂಟಾಗಿದೆ. ಅದನ್ನು ಸಭೆ ಚರ್ಚಿಸಲಿದೆ.
ಲೋಕಸಭಾ ಚುನಾವಣೆಗೆ ಇದು ಪಕ್ವ ಕಾಲವಾಗಿದೆ. ರಾಜ್ಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಸೀಟು ಗೆದ್ದುಕೊಳ್ಳುವ ಶತಪ್ರಯತ್ನದಲ್ಲಿ ಸಿಪಿಎಂ ಈಗಾಗಲೇ ತೊಡಗಿದೆ. ಅದಕ್ಕಿರುವ ಅಗತ್ಯದ ಎಲ್ಲಾ ಪೂರ್ವಭಾವಿ ಕ್ರಮದಲ್ಲಿ ತೊಡಗಿದೆ.