ತ್ಯಾಜ್ಯನಿರ್ಲಕ್ಷ್ಯ: ಮಧೂರು ಪಂ.ಗೆ ೧೦ ಸಾವಿರ ರೂ. ದಂಡ
ಮಧೂರು: ತ್ಯಾಜ್ಯ ಸಂಗ್ರಹ ಕೇಂದ್ರವಾದ ಎಂ.ಸಿ.ಎಫ್ನ ಹೊರಗೆ ತ್ಯಾಜ್ಯವನ್ನು ರಾಶಿ ಹಾಕಿ ರುವುದಕ್ಕೆ ಮಧೂರು ಪಂಚಾ ಯತ್ಗೆ ತ್ಯಾಜ್ಯ ಸಂಸ್ಕರಣೆ ರಂಗದಲ್ಲಿ ಕಾನೂನು ಉಲ್ಲಂಘನೆ ತನಿಖೆ ನಡೆಸುವ ಜಿಲ್ಲಾ ಎನ್ಫೋರ್ಸ್ ಮೆಂಟ್ ಸ್ಕ್ವಾಡ್ ೧೦ ಸಾವಿರ ರೂ. ದಂಡ ವಿಧಿಸಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಉಪೇಕ್ಷಿಸಿರುವುದಕ್ಕೆ ಮಧೂರಿನ ಶಿವಗಿರಿ ಹೋಟೆಲ್, ಉಳಿಯತ್ತಡ್ಕದ ಮೆಜಿಸ್ಟಿಕ್ ರೆಸ್ಟೋರೆಂಟ್ ಎಂಬೀ ಸಂಸ್ಥೆಗಳಿಗೂ ದಂಡ ಹೇರಲಾಗಿದೆ. ಈ ಬಗ್ಗೆ ಪಂಚಾಯತ್ಗೆ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ. ಜಿಲ್ಲಾ ಇನ್ಫರ್ಮೇಶನ್ ಸ್ಕ್ವಾಡ್ ಲೀಡರ್ ಕೆ.ವಿ. ಮುಹಮ್ಮದ್ ಮದನಿ, ಸ್ಕ್ವಾಡ್ ಆಫೀಸರ್ ಎಂ.ಟಿ.ಪಿ ರಿಯಾಸ್, ಸ್ಕ್ವಾಡ್ ಮೆಂಬರ್ ಇ.ಕೆ. ಫಾಸಿಲ್, ಪಂ. ಅಸಿಸ್ಟೆಂಟ್ ಸೆಕ್ರೆಟರಿ ಅಜಯ ಕುಮಾರ್, ಹೆಲ್ತ್ ಇನ್ಸ್ಪೆಕ್ಟರ್ ರಾಮಚಂದ್ರನ್, ಕ್ಲಾರ್ಕ್ ಕೆ. ಅಶೋಕ್ ಕುಮಾರ್ ಭಾಗವಹಿಸಿದರು.