ಕಾನ್ಪುರ: ಡಾಕ್ಟರ್ ಇಲ್ಲದಿರುವಾಗ ಸರಕಾರಿ ಆಸ್ಪತ್ರೆಗೆ ತಲುಪಿದ ರೋಗಿಗಳನ್ನು ಚಾಲಕ ಪರಿಶೀಲಿಸಿ ಚಿಕಿತ್ಸೆ ನಿರ್ದೇಶಿಸಿದ ಘಟನೆ ನಡೆದಿದೆ. ಈತ ಔಷಧಿ ಖರೀದಿಸಲು ಹೊರಗೆ ಚೀಟಿ ಬರೆದು ನೀಡಿದ ಬಗ್ಗೆಯೂ ತಿಳಿದು ಬಂದಿದೆ. ಉತ್ತರಪ್ರದೇಶದ ಕಾನ್ಪುರದ ಪ್ರಸಿದ್ಧ ಸರಕಾರಿ ಆಸ್ಪತ್ರೆಯಾದ ಕಾನ್ಶಿರಾಮ್ ಜೋಯಿಂಟ್ ಹಾಸ್ಪಿಟಲ್ ಆಂಟ್ ಟ್ರೋಮಾ ಸೆಂಟರ್‌ನಲ್ಲಿ ಘಟನೆ ನಡೆದಿದೆ. ಒಂದು ಕೇಸಿನ ವಿಷಯದಲ್ಲಿ ನ್ಯಾಯಾಲಯಕ್ಕೆ ಡಾಕ್ಟರ್ ತೆರಳಿದ್ದಾಗ ಅವರ ಚಾಲಕ ಡಾಕ್ಟರ್‌ರ ಕೊಠಡಿಗೆ ಪ್ರವೇಶಿಸಿ ಔಷಧಿ ನಿರ್ದೇಶಿಸಿರುವುದಾಗಿ ತಿಳಿದು ಬಂದಿದೆ. ಆಸ್ಪತ್ರೆಗೆ ತಲುಪಿದ ರೋಗಿಗಳನ್ನು ಒಳಗೆ ಕರೆಯುವುದು ಹಾಗೂ ರೋಗಗಳ ಬಗ್ಗೆ ತಿಳಿದುಕೊಳ್ಳುತ್ತಿರುವುದು ವೀಡಿಯೋದಿಂದ ಸ್ಪಷ್ಟವಾಗಿದೆ. ಇದರ ಹೊರತು ಚೀಟಿ ಬರೆದುಕೊಟ್ಟು ಇಲ್ಲಿ ಔಷಧ ಲಭ್ಯವಿಲ್ಲವೆಂದು
ಹೊರಗಿನಿಂದ ಖರೀದಿಸಬೇಕೆಂದು ಉಪದೇಶ ನೀಡಿರುವುದು ಸ್ಥಳೀಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳು ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗತೊಡಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಈತನ ವಿರುದ್ಧ ತನಿಖೆಗೆ ಕ್ರಮ ಕೈಗೊಂಡಿದ್ದಾರೆ.







