17ರ ಹರೆಯದ ಬಾಲಕಿಗೆ ಮದುವೆ : ತಂದೆ-ತಾಯಿ, ವರನ ವಿರುದ್ಧ ಕೇಸು

ಬದಿಯಡ್ಕ: ೧೭ರ ಹರೆಯದ ಬಾಲಕಿಗೆ  ಮದುವೆಮಾಡಿಸಿದ ಘಟನೆ ಬೆಳಕಿಗೆ ಬಂದಿದ್ದು, ಇದರಂತೆ ಬಾಲ್ಯವಿವಾಹ ನಿಷೇಧ ಕಾನೂನು ಪ್ರಕಾರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಉನ್ನತಿಯೊಂದರಲ್ಲಿ ವಾಸಿಸುವ  ಕುಟುಂಬದ ಸದಸ್ಯೆಯಾದ  17ರ ಹರೆಯದ  ಬಾಲಕಿಯನ್ನು ಮಂಗಳೂರು ನಿವಾಸಿಯಾದ  ಓರ್ವನಿಗೆ  ಕೆಲವು ದಿನಗಳ ಹಿಂದೆ  ಮದುವೆಮಾಡಿ ಕೊಡಲಾಗಿದೆ. ಈ ಬಗ್ಗೆ ಚೈಲ್ಡ್ ಡೆವಲಪ್‌ಮೆಂಟ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು  ಬಾಲಕಿಯ ತಂದೆ, ತಾಯಿ ಹಾಗೂ ವರನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.  ಬಾಲಕಿಯ  ಹೆತ್ತವರ  ಒತ್ತಾಯದ ಮೇರೆಗೆ  ಗುಪ್ತವಾಗಿ ಮದುವೆ ನಡೆಸಲಾಗಿದೆಯೆಂದು  ದೂರಲಾಗಿದೆ.

You cannot copy contents of this page