ಪೊಲೀಸ್ ವಲಯದ ಸ್ತುತ್ಯರ್ಹವಾದ  ಸೇವೆಯ ಬಳಿಕ ಬಡ್ಡಿ, ಕ್ಯಾಮಿಗೆ ನಿವೃತ್ತಿ

ಕಾಸರಗೋಡು: ಬಡ್ಡಿ ಹಾಗೂ ಕ್ಯಾಮಿ ಇಂದಿನಿಂದ ವಿಶ್ರಾಂತಿ ಜೀವನದತ್ತ ತೆರಳಲಿವೆ. ಹಲವು ವರ್ಷಗಳ ಸ್ತುತ್ಯರ್ಹವಾದ ಸೇವೆಯ ಬಳಿಕ ಈ ಜೋಡಿ ಶ್ವಾನಗಳು ಕೆಲಸದಿಂದ ನಿವೃತ್ತಿ ಹೊಂದುತ್ತಿವೆ. ಇವುಗಳ ಬಗ್ಗೆ ಒಂದಿಷ್ಟು…

ಜಿಲ್ಲಾ ಪೊಲೀಸ್ ಕೆ-೯ ಡಾಗ್ ಸ್ಕ್ವಾಡ್‌ನ ಸದಸ್ಯರಾಗಿವೆ ಈ ಶ್ವಾನಗಳು. ಇವುಗಳಿಗಾಗಿ ಕಾಸರಗೋಡು ಪೊಲೀಸ್ ಹೆಡ್ ಕ್ವಾರ್ಟರ್ಸ್‌ನಲ್ಲಿ ಇಂದು ಬೆಳಿಗ್ಗೆ   ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ತೃಶೂರ್‌ನ ಡಾಗ್ ಟ್ರೈನಿಂಗ್ ಸೆಂಟರ್‌ನಿಂದ ೯ ತಿಂಗಳ ತರಬೇತಿ ಪೂರ್ತಿಗೊಳಿಸಿ ೨೦೧೬ರಂದು ಬಡ್ಡಿ ಎಂಬ ನಾಯಿ ಕಾಸರಗೋಡು ಕೆ -9 ಸ್ಕ್ವಾಡ್‌ನ ಸದಸ್ಯನಾಗಿದೆ. ಅಂದು ಬಡ್ಡಿಗೆ ಒಂದೂವರೆ ವರ್ಷ ಪ್ರಾಯ ಮಾತ್ರವಾಗಿತ್ತು. ಕಳೆದ ಹತ್ತೂವರೆ ವರ್ಷದ ಸೇವೆಯ ಅವಧಿಯಲ್ಲಿ ಹಲವಾರು ಸಾಧನೆಗಳನ್ನು ಕಾಸರಗೋಡಿಗಾಗಿ ಮಾಡಲು ಇವುಗಳಿಗೆ ಸಾಧ್ಯವಾಗಿದೆ. ೨೦೧೭ರಲ್ಲಿ ಕೇರಳ ಪೊಲೀಸ್ ಡ್ಯೂಟಿ ಮೀಟ್‌ನಲ್ಲಿ ಚಿನ್ನದ ಪದಕ, ೨೦೧೮ರಲ್ಲಿ ಜಿಲ್ಲೆಗೆ ಬೇಕಾಗಿ ಕೇರಳ ಪೊಲೀಸ್ ಡ್ಯೂಟಿ ಮೀಟ್‌ನಲ್ಲಿ ರಜತ ಪದಕ ಗಳಿಸಿವೆ. 2019ರಲ್ಲಿ ಲಕ್ನೋದಲ್ಲಿ ಜರಗಿದ ಆಲ್ ಇಂಡಿಯ ಪೊಲೀಸ್ ಡ್ಯೂಟಿ ಮೀಟ್‌ನಲ್ಲಿ ರಾಜ್ಯ ಪೊಲೀಸ್‌ಗೆ ಬೇಕಾಗಿ ಚಿನ್ನದ ಪದಕ ಗಳಿಸಿವೆ. ಅಲ್ಲದೆ ಹಲವಾರು ಗುಡ್ ಎಂಟ್ರಿ ಪಡೆದುಕೊಂಡಿವೆ. ಸುಜಿತ್, ಅಜೇಶ್, ಮನು ಈ ಶ್ವಾನಗಳ ಪ್ರಧಾನ ತರಬೇತುದಾರರಾಗಿದ್ದಾರೆ.

ಕ್ಯಾಮಿ ಮಧ್ಯಪ್ರದೇಶದಲ್ಲಿ ಟ್ರೈನಿಂಗ್ ಪೂರ್ತಿಗೊಳಿಸಿ 2017ರಲ್ಲಿ ಕಾಸರಗೋಡಿನ ಕೆ-9 ಸ್ಕ್ವಾಡ್ ಸದಸ್ಯನಾಗಿ ಆಯ್ಕೆಯಾಗಿತ್ತು.9 ವರ್ಷದ ಕಾಲಾವಧಿಯಲ್ಲಿ ಈ ನಾಯಿ ಕೂಡಾ ಕಾಸರಗೋಡಿಗೆ ಬೇಕಾಗಿ ಹಲವಾರು ಕೇಸುಗಳಲ್ಲಿ ಸಹಾಯಕವಾಗಿ ಕಾರ್ಯನಿರ್ವಹಿಸಿದೆ. ಸ್ತುತ್ಯರ್ಹವಾದ ಹಲವಾರು ಗುಡ್ ಎಂಟ್ರಿ ಈ ಶ್ವಾನವು ಪಡೆದಿದೆ. ಅನೀಶ್, ಥೋಮಸ್, ಟಿನೋ ಕ್ಯಾಮಿಯ ಪ್ರಧಾನ ತರಬೇತುದಾರರು.

RELATED NEWS

You cannot copy contents of this page