ಕುಂಬಳೆ: ಹೊಂಡಗಳಿಂದ ತುಂಬಿಕೊಂಡು ಜನ ಸಂಚಾರಕ್ಕೆ ತೊಡಕಾಗಿದ್ದ ರಸ್ತೆಯನ್ನು ಕ್ಲಬ್‌ನ ಕಾರ್ಯಕರ್ತರು ದುರಸ್ತಿಗೊಳಿಸಿ ಮಾದರಿಯಾಗಿದ್ದಾರೆ. ಕುಂಬಳೆಯಿಂದ ಕೋಟೆಕಾರು ಸಹಿತ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೋಟೆಕಾರ್‌ನ ವಿನಾಯಕ ಕ್ಲಬ್ ಕಾರ್ಯಕರ್ತರು ಮನೋಜ್‌ರ ನೇತೃತ್ವದಲ್ಲಿ ದುರಸ್ತಿಗೊಳಿಸಿದರು.
ರಸ್ತೆಯಲ್ಲಿದ್ದ ಹೊಂಡಗಳಿಗೆ ಕಾಂಕ್ರೀಟ್ ತುಂಡುಗಳನ್ನು ತುಂಬಿಸಿ ಮಣ್ಣು ಹಾಕಿ ಸಮತಟ್ಟುಗೊಳಿಸಲಾಗಿದೆ. ಇದರಿಂದ ಸುಗಮ ವಾಹನ ಸಂಚಾರಕ್ಕೆ ಸಹಕಾರಿಯಾಗಿದೆ. ಹಲವು ಕಾಲದಿಂದ ಈ ಪಂಚಾಯತ್ ರಸ್ತೆಯ ಕೋಟೆಕಾರ್‌ನಲ್ಲಿ ಹೊಂಡಗಳು ತುಂಬಿಕೊಂಡು ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ನಾಗರಿಕರು ಹಲವು ಬಾರಿ ಪಂಚಾಯತ್‌ಗೆ ಮನವಿ ಸಲ್ಲಿಸಿದರೂ ದುರಸ್ತಿಗೆ ಕ್ರಮ ಉಂಟಾಗಿಲ್ಲ. ಇದರಿಂದ ವಾಹನ ಸಂಚಾರಕ್ಕೆ ಪೂರ್ಣ ತೊಡಕಾದ ಹಿನ್ನೆಲೆಯಲ್ಲಿ ವಿನಾಯಕ ಕ್ಲಬ್‌ನ ಕಾರ್ಯಕರ್ತರು ದುರಸ್ತಿಗೊಳಿಸಿದ್ದಾರೆ. ಕ್ಲಬ್‌ನ ಕಾರ್ಯಕರ್ತರ ಶ್ರಮದಾನವನ್ನು ನಾಗರಿಕರು ಅಭಿನಂದಿಸಿದ್ದಾರೆ.







