ವಿಮಾನದಲ್ಲಿ ತಲುಪಿ ಬೈಕ್‌ಗಳಲ್ಲಿ ಸುತ್ತಾಡಿ ದರೋಡೆ: ಉತ್ತರಪ್ರದೇಶ ತಂಡ ಬಂಧನ; ದರೋಡೆಗೆ ಬಳಸುತ್ತಿರುವ ಬೈಕ್‌ಗಳನ್ನು ತರುವುದು ರೈಲಿನಲ್ಲಿ

ಕಾಸರಗೋಡು: ವಿಮಾನಗಳಲ್ಲಿ ಬಂದಿಳಿದು ಬೈಕ್‌ಗಳಲ್ಲಿ ಸುತ್ತಾಡಿ ದರೋಡೆ ನಡೆಸುತ್ತಿರುವ ಉತ್ತರಪ್ರದೇ ಶದ ೬ ಮಂದಿಯನ್ನು ರಾಜ್ಯದ ವಿವಿಧೆಡೆಗಳಲ್ಲಾಗಿ ಪೊಲೀಸರು ನಡೆಸಿದ ಕಾರ್ಯಾಚ ರಣೆಯಲ್ಲಿ ಬಂಧಿಸಿದ್ದಾರೆ.

ಕಣ್ಣೂರು, ಕಳಮಶ್ಶೇರಿ, ತೃಶೂರು ಎಂಬೆಡೆಗಳಲ್ಲಾಗಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇವರನ್ನು ಸೆರೆಹಿಡಿಯಲಾಗಿದೆ. ತೃಶೂರಿನಲ್ಲಿ ಕಳವು ಯತ್ನದ ವೇಳೆ ಈ ತಂಡದ ಮುಖ್ಯಸ್ಥ ನಾದ ಉತ್ತರಪ್ರದೇಶ ಬಾಗ್‌ಪೇಟ್ ನಿವಾಸಿ ರಿಹಾನ್ (20) ಎಂಬಾತನನ್ನು ಮೊದಲು ತೃಶೂರು ಪೊಲೀಸರು ಬಂಧಿಸಿದ್ದರು. ಆತನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ವಿಮಾನದಲ್ಲಿ ಬಂದಿಳಿದು ದರೋಡೆ ನಡೆಸುವ ತಂಡವೊಂದು ರಾಜ್ಯದಾದ್ಯಂತ ಕಾರ್ಯವೆಸಗುತ್ತಿದೆಯೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಅದರಂತೆ ತೃಶೂರು ಪೊಲೀಸರು ನೀಡಿದ ಮಾಹಿತಿಯಂತೆ ಕಳಮಶ್ಶೇರಿ ವಸತಿಗೃಹವೊಂದಕ್ಕೆ ಕಳಮಶ್ಶೇರಿ ಮತ್ತು ತೃಶೂರು ಪೊಲೀಸರು ನಡೆಸಿದ ಜಂಟಿ ದಾಳಿಯಲ್ಲಿ ಆ ವಸತಿಗೃಹದಲ್ಲಿ ವಾಸಿಸುತ್ತಿದ್ದ ದರೋಡೆಕೋರರ ತಂಡಕ್ಕೆ ಸೇರಿದ ಉತ್ತರಪ್ರದೇಶ ಮೀಟ್ ನಿವಾಸಿಗಳಾದ ಸೈಫುಲ್ಲಾ (31), ಮುಹಮ್ಮದ್ ಹರ್ಮಾನ್ ಹನ್ಸಾರಿ (22) ಸುಹೈಲ್ (22), ಶಕೀಬ್ (21) ಮತ್ತು ರಿಹಾನ್‌ಖಾನ್ (22) ಎಂಬವರನ್ನು ಬಂಧಿಸಲಾಗಿದೆ. ಇವರು ತಂಗಿದ್ದ ವಸತಿಗೃಹದ ಕೊಠಡಿಯಲ್ಲಿ  ದರೋಡೆಗಾಗಿ ಉಪಯೋಗಿಸಲಾಗು ತ್ತಿದ್ದ ಕೇಬಲ್ ಕಟ್ಟರ್‌ಗಳು, ವಿವಿಧ ರೀತಿಯ  ಕೀಲಿ ಕೈಗಳು, ಮೊಬೈಲ್ ಫೋನ್‌ಗಳು, ವಾಚ್‌ಗಳು, ನಗದು, ಗುರುತು ಪತ್ರಗಳು, ರೈಲು ಹಾಗೂ ವಿಮಾನದ ಟಿಕೆಟ್‌ಗಳು ಪತ್ತೆಯಾಗಿದೆ. 

ಇವರನ್ನು   ತೀವ್ರ ವಿಚಾರಣೆಗೊಳಪಡಿಸಿ ದಾಗ ಇದೇ ತಂಡಕ್ಕೆ ಸೇರಿದ ನಾಲ್ವರು ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಾಗಿ ನೆಲೆಸಿರುವ ಮಾಹಿತಿ ಲಭಿಸಿದೆ. ಆ ಬಗ್ಗೆ  ನೀಡಿದ ಮಾಹಿತಿಯಂತೆ ಕಣ್ಣೂರು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮತ್ತೆ ನಾಲ್ವರನ್ನು ಸೆರೆಹಿಡಿಯಲಾಗಿದೆ.  ಆದರೆ ಇವರ ಪೂರ್ಣ ಮಾಹಿತಿ  ಇನ್ನೂ ಹೊರಬಂದಿಲ್ಲ. ಬಂಧಿತರು ದರೋಡೆಗಾಗಿ ಉಪಯೋಗಿಸುವ ಬೈಕ್‌ಗಳನ್ನು ಮುಂಗಡವಾಗಿ ರೈಲುಗಳಲ್ಲಿ ತಂದಿಳಿಸುತ್ತಾರೆ.  ನಂತರ ಅವರು ವಿಮಾನದಲ್ಲಿ ಬಂದಿಳಿದು  ಬೈಕ್‌ಗಳನ್ನು ಉಪಯೋಗಿಸಿ ದರೋಡೆಗೆ ಬಳಸುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇವರು ಶಂಕೆ ಮೂಡದಂತೆ  ನಿರ್ಮಾಣ ಕಾರ್ಮಿಕರು ಧರಿಸುವ ಬಟ್ಟೆಗಳನ್ನೇ ಧರಿಸುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ತಂಡದವರು ರಾಜ್ಯಾದ್ಯಂತ  ನಡೆದ ಹಲವು ದರೋಡೆ ಪ್ರಕರಣದಲ್ಲಿ ಶಾಮೀಲಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು ಅದರಂತೆ ಅವರನ್ನು ತೀವ್ರ ವಿಚಾರಣೆಗೊ ಪಡಿಸಲಾಗುತ್ತಿದೆ.

RELATED NEWS

You cannot copy contents of this page