ವಿವಿಧೆಡೆಗಳಲ್ಲಿ ಮೂರು ರಸ್ತೆ ಅಪಘಾತಗಳು: ಇಬ್ಬರಿಗೆ ಗಂಭೀರ: 8 ಮಂದಿ ಗಾಯ

ಕಾಸರಗೋಡು: ಮುಂಜಾನೆ ಒಂದೇ ದಿನದಲ್ಲಿ  ಒಂದರ ಹಿಂದೆ ಒಂದರಂತೆ ಮೂರು ಅಪಘಾತಗಳು ನಡೆದು ಅದರಲ್ಲಿ ೮ ಮಂದಿ ಗಾಯಗೊಂಡ ಘಟನೆ ನಿನ್ನೆ ಸಂಭವಿಸಿದೆ. ಅಪಘಾತ ನಡೆದ ಈ ಮೂರು ಪ್ರದೇಶಗಳಿಗೂ ಅಗ್ನಿಶಾಮಕದಳ ಬಿಡುವಿಲ್ಲದ ರಕ್ಷಾ ಕಾರ್ಯಾಚರಣೆ ನಡೆಸಿದೆ.

ಬದಿಯಡ್ಕ ಕನ್ಯಪ್ಪಾಡಿಯಲ್ಲಿ ಕಾರು ಮತ್ತು ಲಾರಿ ಢಿಕ್ಕಿ ಹೊಡೆದು ಆರು ಮಂದಿ ಗಾಯಗೊಂಡ ಘಟನೆ ನಿನ್ನೆ ಮುಂಜಾನೆ ಸುಮಾರು 1.45ರ ವೇಳೆ  ನಡೆದಿದೆ. ಕಾರಿನಲ್ಲಿದ್ದ ಉಪ್ಪಳ ಮುಸೋಡಿ ನಿವಾಸಿಗಳಾದ ಅಹಮ್ಮದ್ ಸಿನಾನ್ (17), ಅಲ್ಫರ್ (18) ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕಾರಿನಲ್ಲಿದ್ದ ರೌಫ್ (19), ಸಿನಾನ್ ಅಬ್ದುಲ್ಲ (19), ರಾಸಿ (20), ಅಸ್ಲಂ (19) ಎಂಬವರು ಗಾಯಗೊಂಡಿದ್ದು ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಈ ಕಾರುಗಳಲ್ಲಿ ಒಟ್ಟು ೯ ಮಂದಿ ಪ್ರಯಾಣಿಸುತ್ತಿದ್ದರು. ವಿಷಯ ತಿಳಿದ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸುಕು ವರ್ಗೀಸ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿ ಢಿಕ್ಕಿ ಹೊಡೆದು ನಜ್ಜುಗುಜ್ಜಾದ ವಾಹನಗಳನ್ನು ಬದಿಗೆ ಸರಿಸಿ   ಸಾರಿಗೆ ಸಂಚಾರ ಸುಗಮಗೊಳಿಸಿದರು. ಢಿಕ್ಕಿಯ ಆಘಾತಕ್ಕೆ ಲಾರಿಯ ಡೀಸೆಲ್ ಟ್ಯಾಂಕ್ ಒಡೆದು ಹೋಗಿ ಡೀಸೆಲ್ ರಸ್ತೆಗೆ ಹರಿಯತೊಡಗಿತ್ತು. ಅದನ್ನೂ ಅಗ್ನಿಶಾಮಕದಳ ಶುಚೀಕರಿಸಿತು.

ಇದೇ ರೀತಿ ಬೋವಿಕ್ಕಾನದಲ್ಲಿ ಜೀಪು ಮತ್ತು ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರ ಬದಿಯಡ್ಕ ಬೋಳುಕಟ್ಟೆಯ ಅಕ್ಷಯ್‌ಕೃಷ್ಣ (23) ಮತ್ತು ಜೀಪು ಪ್ರಯಾಣಿಕ ಚೆಂಗಳ ಕಲ್ಲಕಟ್ಟೆ ಬಾರಿಕ್ಕಾಡಿನ ನಿಖೇಶ್ (26) ಗಂಭೀರ ಗಾಯಗೊಂಡಿದ್ದು, ಅವರನ್ನು  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಬೆಳಿಗ್ಗೆ ಸುಮಾರು 6.25ರ ವೇಳೆ ಈ ಅಪಘಾತ ನಡೆದಿದೆ. ಕಾಸರಗೋಡಿನ ಯೋಗೀಶ್ ಮತ್ತು ಇತರರು ತಲಕಾವೇರಿ ಕ್ಷೇತ್ರದರ್ಶನಕ್ಕೆ ಜೀಪಿನಲ್ಲಿ ಹೋಗುತ್ತಿದ್ದ ವೇಳೆ ಬೋವಿಕ್ಕಾನ ಜಂಕ್ಷನ್‌ನಿಂದ ಕುತ್ತಿಕ್ಕೋಲ್ ತಿರುವು ರಸ್ತೆಗೆ ತಲುಪಿ ದಾಗ ಎದುರುಗಡೆಯಿಂದ ಬರುತ್ತಿದ್ದ ಬೈಕ್  ಪರಸ್ಪರ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಆಘಾತಕ್ಕೆ ಜೀಪು ಪಲ್ಟಿಯಾಗಿ ಬಿದ್ದಿದೆಯಲ್ಲದೆ  ಹಿಂದಿನ ಸೀಟಿನಲ್ಲಿ ಕುಳಿತಿದ್ದ ನಿಖೇಶ್  ರಸ್ತೆಗೆ ಬಿದ್ದು ಅವರ ತಲೆಗೆ ಗಂಭೀರ ಏಟು ಬಿದ್ದಿದೆ. ಈ ಜೀಪಿನಲ್ಲಿ ಇತರ ೫ ಮಂದಿ ಪ್ರಯಾಣಿ ಕರಿದ್ದು ಅವರು ಅನಾಹುತದಿಂದ ಪಾರಾಗಿದ್ದಾರೆ.  ಅಪಘಾತದಲ್ಲಿ ಬೈಕ್ ಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸುಕು ವರ್ಗೀಸ್ ನೇತೃತ್ವದ ಕಾಸರಗೋಡು ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಊರವರ ಸಹಾಯ ದಿಂದ ರಕ್ಷಣಾ ಕಾರ್ಯಚರಣೆ ನಡೆಸಿದರು.

ಇದೇ ರೀತಿ ನಾಯಮ್ಮಾರಮೂಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಮುಂಜಾನೆ 4 ಗಂಟೆಗೆ ಕಾರು ನಿಯಂತ್ರಣ ತಪ್ಪಿ ರಸ್ತೆಯ ಗೋಡೆಗೆ ಬಡಿದು ಅದರಲ್ಲಿ ದ್ದವರು ಅದೃಷ್ಟವಶಾತ್ ಸಂಭಾವ್ಯ ಅನಾಹುತದಿಂದ ಪಾರಾಗಿದ್ದಾರೆ. ಕಾರು ಚೆರ್ಕಳದಿಂದ ಮಂಗಳೂ ರಿಗೆ ಸಂಚರಿಸು ತ್ತಿತ್ತು. ಅದರ ಮುಂದಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿ ಹೊಗೆ ಏಳಲಾರಂಭಿಸಿತು. 

ವಿಷಯ ತಿಳಿದ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸುಕು ವರ್ಗೀಸ್ ನೇತೃತ್ವದಲ್ಲಿ ಇತರ ಸಿಬ್ಬಂದಿಗಳಾದ  ವಿ.ಎಸ್. ಗೋಕುಲ್‌ಕೃಷ್ಣನ್, ಟಿ. ಅಮಲ್‌ರಾಜ್, ಎಂ.ಎಂ. ಅರುಣ್ ಕುಮಾರ್, ಇ ಪ್ರಸೀತ್ ಮತ್ತು ವಿ.ವಿ. ರಂಜಿತ್ ಎಂಬಿ ವರನ್ನೊಳಗೊಂಡ ತಂಡ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿತು.

RELATED NEWS

You cannot copy contents of this page