ಅಡೂರು: ತಂದೆಯ ಜೊತೆ ರಬ್ಬರ್ ಟ್ಯಾಪಿಂಗ್ಗೆ ತೆರಳಿದ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರು ಮಣಿಯೂರು ಚೆನ್ನಯ್ಯಮೂಲೆಯ ನಿವಾಸಿ ಶೋಭಿತ್ (26) ನೇಣು ಬಿಗಿದ ಯುವಕ. ನಿನ್ನೆ ಬೆಳಿಗ್ಗೆ ತಂದೆಯ ಜೊತೆ ರಬ್ಬರ್ ಟ್ಯಾಪಿಂಗ್ಗಾಗಿ ತೆರಳಿದ್ದರು. ಆದರೆ ಸಮಯ ಕಳೆದರೂ ಶೋಭಿತ್ ಮನೆಗೆ ಹಿಂತಿರುಗದ ಹಿನ್ನೆಲೆಯಲ್ಲಿ ಮನೆ ಮಂದಿ ಹುಡುಕಾಡುತ್ತಿದ್ದ ಮಧ್ಯೆ ಈ ಮೊದಲು ಇವರು ವಾಸಿಸುತ್ತಿದ್ದ ಹಳೆಯ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದಾರೆ. ಕೂಡಲೇ ಹಗ್ಗ ತುಂಡರಿಸಿ ಮುಳ್ಳೇರಿಯದ ಆಸ್ಪತ್ರೆಗೆ ತಲುಪಿಸಿದರಾದರೂ ಆ ವೇಳೆಗೆ ಸಾವು ಸಂಭವಿಸಿತ್ತು. ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕೊಂ ಡೊಯ್ಯಲಾಯಿತು. ಅಡೂರಿನ ಅಂಗಡಿಯೊಂದರಲ್ಲಿ ಶೋಭಿತ್ ಕಾರ್ಮಿಕನಾಗಿದ್ದರು. ಆದರೆ ಆತ್ಮಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲ. ಆದೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೃತರು ತಂದೆ ಅಪ್ಪಯ್ಯ ನಾಯ್ಕ್, ತಾಯಿ ಪ್ರೇಮ, ಸಹೋದರ ಸುಕುಮಾರ, ಸಹೋದರಿ ಯೋಗೀಶ್ವರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






