ಕಾಸರಗೋಡು: ಬಳಾಂತೋಡು ಕೆಎಸ್‌ಇಬಿ ಸೆಕ್ಷನ್ ಕಚೇರಿಯ ಮುಂಭಾಗ ತೆಗೆದಿರಿಸಿದ್ದ ಸುಮಾರು ಎರಡು ಲಕ್ಷ ರೂ. ಮೌಲ್ಯದ ಸ್ಕ್ರಾಪ್ ವಯರ್‌ಗಳನ್ನು ಕಳವು ಮಾಡಲಾಗಿದೆ. ಮಂಗಳವಾರ ಮುಂಜಾನೆ 3.25ರ ವೇಳೆ ಕಳವು ನಡೆದಿದೆ. ಅಸಿ. ಇಂಜಿನಿಯರ್ ಒ.ವಿ. ವಿಷ್ಣುರವರ ದೂರಿನಂತೆ ರಾಜ ಪುರಂ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪಿಕಪ್ ಸಹಿತ ತಲುಪಿ ಕಳವು ನಡೆಸಿರಬೇಕೆಂದು ಶಂಕಿಸಲಾಗಿದೆ. ಸ್ಟೋರ್ ಯಾರ್ಡ್‌ನ ೯೫೦ ಕಿಲೋ ತೂಕದ ಅಲ್ಯುಮೀ ನಿಯಂ ಕೋರ್ ಸ್ಟೀಲ್ ರೀ ಇನ್‌ಫೋರ್ಸ್‌ಡ್ ವಯರ್‌ಗಳನ್ನು ಕಳವು ಮಾಡಲಾಗಿದೆ. ಶಬ್ದ ಕೇಳಿ ನೌಕರರು ಎಚ್ಚೆತ್ತಾಗ ಕಳ್ಳರು ವಾಹನ ಸಹಿತ ಪರಾರಿಯಾಗಿದ್ದಾರೆ. ಆರರಷ್ಟು ಮಂದಿ ತಂಡದಲ್ಲಿದ್ದಿರುವುದಾಗಿಯೂ, ಅವರು ಮುಖಕ್ಕೆ ಮಾಸ್ಕ್ ಧರಿಸಿರುವು ದಾಗಿಯೂ ನೌಕರರು ಹೇಳುತ್ತಾರೆ.






