ಕಾಸರಗೋಡು: ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆ ಯಲ್ಲಿ ಮನೆಯಲ್ಲಿ ಬಚ್ಚಿಟ್ಟಿದ್ದ 1.718 ಕಿಲೋ ಗ್ರಾಂ ಗಾಂಜಾ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂ ಧಿಸಿ ಪಾಣತ್ತೂರು ಪುತ್ತೂರಡ್ಕದ ಪಿ.ಸಿ. ಮೀನಾಕ್ಷಿ (47) ಎಂಬಾಕೆಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಕಾಸರಗೋಡು ಎಕ್ಸೈಸ್ ಇಂಟೆಲಿಜೆನ್ಸ್ ಆಂಡ್ ಇನ್ವೆಸ್ಟಿಗೇಷನ್ ಬ್ಯೂರೋಗೆ ಲಭಿಸಿದ ಗುಪ್ತ ಮಾಹಿತಿಯಂತೆ ಕಾಸರಗೋಡು ಎಕ್ಸೈಸ್ ಎನ್ಫೋರ್ಸ್ಮೆಂಟ್ ಆಂಡ್ ಆಂಟೀ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್ನ ಇನ್ಸ್ಪೆಕ್ಟರ್ ವಿಷ್ಣು ಪ್ರಕಾಶ್ರ ನೇತೃತ್ವದ ಅಬಕಾರಿ ತಂಡ ಮೊನ್ನೆ ರಾತ್ರಿ ಪಾಣತ್ತೂರು ಪುತ್ತೂರಡ್ಕದಲ್ಲಿ ದಾಳಿ ಮತ್ತು ತಪಾಸಣೆ ನಡೆಸಿದಾಗ ಆ ಮನೆಯ ಕೊಠಡಿಯೊಳಗೆ ಗಾಂಜಾ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಅದಕ್ಕೆ ಸಂಬಂಧಿಸಿ ಮೀನಾಕ್ಷಿ ಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ಗಳಾದ ಎಂ.ವಿ. ಸುಧೀಂದ್ರನ್,
ಸಿ.ಕೆ.ವಿ ಸುರೇಶ್, ಪ್ರಿವೆಂಟೀವ್ ಆಫೀಸರ್ಗಳಾದ ಎಂ.ಕೆ. ರವೀಂದ್ರನ್, ಬಿ.ಎಸ್. ಮೊಹಮ್ಮದ್ ಕಬೀರ್, ಎಂ.ಎಂ. ಪ್ರಸಾದ್, ಎ. ರೀನಾ, ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಕೆ.ವಿ. ಅನೀಶ್, ಎ.ವಿ. ಪ್ರಶಾಂತ್ ಕುಮಾರ್ ಮತ್ತು ಪಿ. ಶೈಲೇಶ್ ಕುಮಾರ್ ಎಂಬವರು ಒಳಗೊಂಡಿದ್ದರು.







