ಕಾಸರಗೋಡು: ಹೋಟೆಲ್‌ನಲ್ಲಿ ಆಹಾರ ಸೇವಿಸಲು ಬಂದ ಯುವಕರು ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನಿಸಿದಾಗ ಹೋಟೆಲ್ ನಡೆಸುತ್ತಿರುವ ವ್ಯಕ್ತಿ ಸಹಿತ ಐವರು ಸೇರಿ ಆ ಯುವಕರಿಗೆ ಹಲ್ಲೆ ನಡೆಸಿದ ಬಗ್ಗೆ ನೀಡಲಾದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಡನೀರು ಕಳರಿ ಹೌಸ್‌ನ ಅಜಿತ್ ಕೆ (23) ಈ ಬಗ್ಗೆ ದೂರು ನೀಡಿದ್ದು ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೆಂಗಳ ಸಿಟಿಜನ್‌ನಗರದ ಹೋಟೆಲೊಂದಕ್ಕೆ ನಾನು ಮತ್ತು ಸ್ನೇಹಿತರಾದ ಅಭಿಲಾಷ್ (22), ಸುಮೋದ್ (23), ಹರಿಪ್ರಸಾದ್ (20) ಮತ್ತು ಕೆ. ಅಜಿತ್ (22) ಸೆ. 9ರಂದು ಆಹಾರ ಸೇವಿಸಲು ಹೋಗಿದ್ದೆವೆಂದೂ ಆ ವೇಳೆ ಹೋಟೆಲ್‌ನವರು ನಮಗೆ ನೀಡಿದ ಆಹಾರದ ಗುಣಮಟ್ಟದ ಬಗ್ಗೆ ನಾನು ಪ್ರಶ್ನಿಸಿದಾಗ ಹೋಟೆಲ್ ನಡೆಸುತ್ತಿರುವ ವ್ಯಕ್ತಿ ಸೇರಿದಂತೆ ಇತರ ಮೂವರು ನಮಗೆ ಕಬ್ಬಿಣದ ಸರಳಿನಿಂದ ಹೊಡೆದು ಗಾಯಗೊಳಿಸಿದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅಜಿತ್ ಆರೋಪಿಸಿದ್ದಾರೆ.






