ಉಪ್ಪಳ: ಬೈಕ್‌ನಲ್ಲಿ ತಲುಪಿ ಪಾದಚಾರಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಪ್ರಕರಣದಲ್ಲಿ ಇನ್ನೋರ್ವ ಸೆರೆಗೀಡಾಗಿದ್ದಾನೆ. ಕುಂಬಳೆ ಬಂಬ್ರಾಣದ ಈಂದುಗುರಿ ನಿವಾಸಿ ಸುಧೀಶ್ (27) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಂದನೇ ಆರೋಪಿಯಾದ ಬಂಬ್ರಾ ಣದ ಸಂದೀಪ್ ಎಂಬಾತನನ್ನು ಈ ಮೊದಲು ಬಂಧಿಸಲಾಗಿತ್ತು.
೨೦೨೬ ಜೂನ್ ೨೨ರಂದು ಸಂಜೆ ಹೊಸಂಗಡಿ ಸರ್ವೀಸ್ ರಸ್ತೆಯಲ್ಲಿ ಮಹಿಳೆ ನಡೆದುಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ತಲುಪಿದ ತಂಡ ಸರ ಎಗರಿಸಿ ಪರಾರಿಯಾಗಿತ್ತು. ಈ ಪ್ರಕರಣದಲ್ಲಿ ಸೆರೆಗೀಡಾಗದೆ ತಪ್ಪಿಸಿಕೊಂಡಿದ್ದ ಸುಧೀಶ್‌ನನ್ನು ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ವಿಷ್ಣು ಪ್ರಸಾದ್‌ರ ನೇತೃತ್ವದಲ್ಲಿ ಬಂಧಿಸಲಾಗಿದೆ.
ಪೊಲೀಸ್ ತಂಡದಲ್ಲಿ ಎಸ್‌ಐ ಶಬರಿಕೃಷ್ಣನ್,ಎಎಸ್‌ಐ ಅಜಿತ್, ಸಿಪಿಒ ಬಿನೀಶ್ ಎಂಬಿವರಿದ್ದರು.






