ಕಾಸರಗೋಡು ಸ್ಪೋಟ್ಸ್ ಕೌನ್ಸಿಲ್ ಕಚೇರಿಗೆ ವಿಜಿಲೆನ್ಸ್ ದಾಳಿ: ಗಂಭೀರ ವಂಚನೆಗಳು ಪತ್ತೆ

ಕಾಸರಗೋಡು: ಜಿಲ್ಲಾ ಸ್ಪೋಟ್ಸ್ ಕೌನ್ಸಿಲ್ ಕಚೇರಿಗೆ ವಿಜಿಲೆನ್ಸ್ ತಂಡ ನಿನ್ನೆ ನಡೆಸಿದ ದಾಳಿಯಲ್ಲಿ ಭಾರೀ ವಂಚನೆ ಪತ್ತೆಹಚ್ಚಲಾಗಿದೆ. ಈ ಬಗ್ಗೆ ಸಮಗ್ರ ವರದಿ ತಯಾರಿಸಿ  ಶೀಘ್ರ ವಿಜಿಲೆನ್ಸ್ ಡೈರೆಕ್ಟರ್‌ಗೆ ಕಳುಹಿಸಲಾಗುವುದು. ಅನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾ ಗುವುದೆಂದು  ಅಧಿಕಾರಿಗಳು ತಿಳಿಸಿದ್ದಾರೆ. 

2025 ಸೆಪ್ಟಂಬರ್ 29ರಂದು ಚೆರ್ವತ್ತೂರಿನಲ್ಲಿ ನಡೆದ ಜಿಲ್ಲಾ ಕಂದಾಯ  ಬಿಲ್ಲುಗಾರಿಕೆ  ಚಾಂಪ್ಯನ್ ಶಿಪ್‌ನಲ್ಲಿ ಅರ್ಹತಾಪಟ್ಟಿಯಲ್ಲಿ ಒಳಗೊಳ್ಳದ ಇಬ್ಬರನ್ನು ರಾಜ್ಯ ಚಾಂಪಿಯನ್‌ಶಿಪ್‌ಗೆ  ಸೇರಿಸಿಕೊಂಡಿರು ವುವುದು ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ಇದರ ಹಿಂದೆ ಕಾರ್ಯಾಚರಿಸಿದವರು ಹಾಗೂ ಅರ್ಹತೆಯಿಲ್ಲದೆ ರಾಜ್ಯ ಚಾಂಪ್ಯನ್‌ಶಿಪ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಕುರಿತು ಸಮಗ್ರ ತನಿಖೆ ನಡೆಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಪೋಟ್ಸ್ ಕೌನ್ಸಿಲ್‌ನ ಅಧೀನತೆಯಲ್ಲಿರುವ ಈಜುಕೊಳದ ಗುತ್ತಿಗೆದಾರನಿಗೆ ಸಂಬಂಧಪಟ್ಟು ವಿವಿಧ ಖಾತೆಗಳಿಂದ ಕಚೇರಿಯ ತಾತ್ಕಾಲಿಕ ನೌಕರ ಹಣ  ಪಡೆದುಕೊಂಡಿರುವುದನ್ನು ತಪಾಸಣೆಯಲ್ಲಿ ಪತ್ತೆಹಚ್ಚಲಾಗಿದೆ.  ತಾತ್ಕಾಲಿಕ ಕಚೇರಿ ಅಸಿಸ್ಟೆಂಟ್ ಆಗಿದ್ದ ವ್ಯಕ್ತಿ ಗೂಗಲ್ ಪೇ ಮೂಲಕ ೩೮,೪೦೦ ರೂ.ಗಳನ್ನು ಪಡೆದುಕೊಂ ಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ರಾಜ್ಯ ಮಟ್ಟದಲ್ಲಿ ನಡೆದ ದಾಳಿಯಲ್ಲಿ ಇತರ ಜಿಲ್ಲೆಗಳಲ್ಲೂ ಗಂಭೀರ ವಂಚನೆಗಳನ್ನು ಪತ್ತೆಹಚ್ಚಲಾಗಿದೆ.

You cannot copy contents of this page