ಪೈವಳಿಕೆ: ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‌ನ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಬ್ಯಾಂಕ್ ಸಭಾಂಗಣದಲ್ಲಿ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ಬಾಗ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಬ್ಯಾಂಕ್‌ನ ವಾರ್ಷಿಕ ವರದಿ, ಲೆಕ್ಕಪತ್ರಗಳು, ಬ್ಯಾಂಕ್‌ನ ವ್ಯವಹಾರ ಹಾಗೂ ಪ್ರಗತಿಯ ವಿವರಗಳನ್ನು ಮಂಡಿಸಲಾಯಿತು. ಠೇವಣಿ, ಸಾಲ ವಿತರಣೆ, ಸದಸ್ಯರ ಸಂಖ್ಯೆ ಸೇರಿದಂತೆ ಬ್ಯಾಂಕ್‌ನ ವಿವಿಧ ಚಟುವಟಿಕೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ವರದಿ ಪ್ರಕಾರ ಬ್ಯಾಂಕ್‌ನ ಠೇವಣಿ 31,98,19,000 ರೂ. ಆಗಿದ್ದು, ವಿತರಿಸಲಾದ ಒಟ್ಟು ಸಾಲದ ಮೊತ್ತ 29,87,41,000 ರೂ. ಆಗಿದೆ. ಬ್ಯಾಂಕ್‌ನಲ್ಲಿ ವಿವಿಧ ವರ್ಗಗಳ ಒಟ್ಟು 7,705 ಸದಸ್ಯರು ಇದ್ದಾರೆ.
ಬ್ಯಾಂಕಿನ ವಿವಿಧ ಶಾಖೆಗಳ ಕಾರ್ಯಚಟುವಟಿಕೆಗಳು ಹಾಗೂ ವ್ಯವಹಾರದ ಪ್ರಗತಿಯ ವಿವರಗಳನ್ನು ಸಭೆಯ ಮುಂ ದಿಡಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಪುಷ್ಪ ಜಯರಾಮ ಬಾಯಿಕಟ್ಟೆ, ಮಾಜಿ ಅಧ್ಯಕ್ಷÀ ಶ್ರೀಧರ್ ಹೊಳ್ಳ ಹಾಗೂ ಗಣಪತಿ ಭಟ್, ನಿರ್ದೇಶಕ ರಾದ ವಲ್ಟಿ ಡಿ. ಸೋಜ, ಸಾಲಿ ಪೈವಳಿಕೆ, ಸುಂದರ, ಪ್ರಶಾಂತ ಬಾಯಿಕಟ್ಟೆ, ಶಾಲಿನಿ ರೈ, ಆಶಾದೇವಿ ಹಾಗೂ ಸುದರ್ಶನ್ ಬಲ್ಲಾಳ್ ಕೊಡ್ಯಮೆ ಶುಭ ಹಾರೈಸಿದರು. ಪೈವಳಿಕೆ ಪಂಚಾಯತ್ ಉಪಾಧ್ಯಕ್ಷ ರಾಘವೇಂದ್ರ ಭಟ್, ವಿವಿಧ ಪಕ್ಷಗಳ ರಾಜಕೀಯ ನೇತಾರರಾದ ಲಾರೆನ್ಸ್ ಡಿ. ಸೋಜ, ಪ್ರಸಾದ ರೈ, ಅಜಿತ್ ಎಂ.ಸಿ., ಚಂದ್ರ ನಾಯ್ಕ್, ಸಲೀಲ್ ಮಾಸ್ಟರ್ ಹಾಗೂ ಅಬ್ದುಲ್ ಮಾಸ್ಟರ್ ಉಪಸ್ಥಿತರಿ ದ್ದರು. ನಿರ್ದೇಶಕ ಅಜಿಜ್ ಕಲಾಯಿ ಸ್ವಾಗತಿಸಿದರು. ಬ್ಯಾಂಕ್‌ನ ವಾರ್ಷಿಕ ವರದಿಯನ್ನು ಕೇಶವ ಬಾಯಿಕಟ್ಟೆ ಮಂಡಿಸಿದರು.







