ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಕೆ.ಪಿ. ಕುಂಞಿಕಣ್ಣನ್ ಸಂಸ್ಮರಣೆ

ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ, ಮಾಜಿ ಶಾಸಕರಾಗಿದ್ದ ಕೆ.ಪಿ . ಕುಂಞ ಕಣ್ಣನ್‌ರ ಎರಡನೇ ಸಂಸ್ಮರಣಾ ಕಾರ್ಯಕ್ರಮದಲ್ಲಿ ನೇತಾರರು ಪುಷ್ಪಾರ್ಚನೆ ನಡೆಸಿದರು. ಬಳಿಕ ನಡೆದ ಸಭೆಯಲ್ಲಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆ.ಪಿ. ಕುಂಞ ಕಣ್ಣನ್ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ತನ್ನೆಲ್ಲಾ ಶಕ್ತಿಯನ್ನು ಮೀರಿ ದುಡಿದ ನೇತಾರರಾಗಿದ್ದರು ಎಂದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯ ದರ್ಶಿ ವಾರಿಜಾಕ್ಷನ್ .ಕೆ ಉದ್ಘಾಟಿಸಿದರು. ನೇತಾರರಾದ ಚಂದ್ರಹಾಸ ರೈ , ಕುಂಜಾರ್ ಮೊಹಮ್ಮದ್ ಹಾಜಿ, ಗಂಗಾ ಧರ ಗೋಳಿಯಡ್ಕ, ಖಾದರ್ ಮಾನ್ಯ, ರಾಮ ಪಟ್ಟಾಜೆ, ಪಿತಾಂಬರನ್, ಕೃಷ್ಣದಾಸ್ ಡಿ, ಶ್ರೀನಾಥ್ ಬದಿಯಡ್ಕ, ಕೃಷ್ಣ ಕುಮಾರ್, ಕುಮಾರನ್ ನಾಯರ್, ಅಬೂಬಕ್ಕರ್ ಬಣ್ಪುತ್ತಡ್ಕ, ಲೀಲಾವತಿ ಕುಂಟಾಲುಮೂಲೆ, ಖಮರುದ್ದೀನ್, ಸತೀಶನ್ ಪೆರುಮುಂಡ, ಲೀಲಾವತಿ ಪಟ್ಟಾಜೆ, ಸುಜಾತ ಚೆಡೇಕಲ್, ನಳಿನಿ ಕುಟ್ಟಿಮೂಲೆ, ಹೈಮಾವತಿ, ವನಜ, ಜ್ಯೋತಿಲಕ್ಮಿ ಉಪಸ್ಥಿತರಿದ್ದರು. ಲೋಹಿತಾಕ್ಷನ್ ಸ್ವಾಗತಿಸಿ, ಗೋಪಾಲ ದರ್ಬೆತ್ತಡ್ಕ ವಂದಿಸಿದರು.

You cannot copy contents of this page