3 ದಿನಗಳ ಬ್ಯಾಂಕ್ ಮುಷ್ಕರ ಹಿಂತೆಗೆತ

ಹೊಸದಿಲ್ಲಿ: ಇಂದಿನಿಂದ ಮೂರು ದಿನ ನಡೆಸಲು ನಿರ್ಧರಿಸಲಾಗಿದ್ದ ಬ್ಯಾಂಕ್ ನೌಕರರ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ. ಮುಷ್ಕರವನ್ನು ಮುಂದೂಡಿರುವುದಾಗಿ ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟವಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ತಿಳಿಸಿದೆ. ನಿನ್ನೆ ರಾತ್ರಿ ಇಂಡ್ಯನ್ ಬ್ಯಾಂಕ್ಸ್ ಅಸೋಸಿಯೇಶನ್ (ಐಬಿಎ)ನೊಂದಿಗೆ ನಡೆಸಿದ ಚರ್ಚೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ವಾರದಲ್ಲಿ ೫ ದಿನ ಕೆಲಸ ಎಂಬ ಬೇಡಿಕೆಯನ್ನು ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿ ರೂಪೀಕರಿಸಲು ಒಪ್ಪಂದವಾಗಿದೆ. ಇತರ ಬೇಡಿಕೆಗಳಲ್ಲಿ  ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ಲಭಿಸಿದೆ ಎಂದು ನೌಕರರ ಸಂಘಟನೆಗಳು ತಿಳಿಸಿವೆ.

ಮುಷ್ಕರ ಹಿಂತೆಗೆಯುವುದ ರೊಂದಿಗೆ ಇಂದು ದೇಶಾದ್ಯಂತ ಬ್ಯಾಂಕ್‌ಗಳು ಎಂದಿನಂತೆ ತೆರೆದು ಕಾರ್ಯಾಚರಿಸುತ್ತಿವೆ. ಬ್ಯಾಂಕ್‌ಗಳ ಚಟುವಟಿಕೆ ದಿನವನ್ನು ವಾರದಲ್ಲಿ ೫ ದಿನವಾಗಿ ಬದಲಾಯಿಸಬೇಕು ಎಂಬುದು ಸಂಘಟನೆಗಳ ಪ್ರಧಾನ ಬೇಡಿಕೆಯಾಗಿದೆ. ಅದೇ ರೀತಿ ಪಿಂಚಣಿ ಪರಿಷ್ಕರಣೆ ಜ್ಯಾರಿಗೊಳಿಸಬೇಕು, ಎನ್‌ಪಿಎಸ್ ನೌಕರರಿಗೆ  ಹಳೆಯ ಪಿಂಚಣಿ ಯೋಜನೆಗೆ  ಬದಲಾಗಲು ಅವಕಾಶ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಮೂರು ದಿನಗಳ ಮುಷ್ಕರ ಘೋಷಿಸಲಾಗಿತ್ತು.  ಮೂರು ದಿನಗಳ ಮುಷ್ಟರ ಘೋಷಣೆಯ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ನಿನ್ನೆಯೂ ತೆರೆದು ಕಾರ್ಯಾಚರಿಸಿದ್ದವು. ಸೆ. ೧೧ರಂದು ನಡೆಸಿದ ಒಂದು ದಿನದ ಮುಷ್ಕರದ ಮುಂದುವರಿಕೆಯಾಗಿ ಮೂರು ದಿನಗಳ  ಮುಷ್ಕರ ಘೋಷಿಸಲಾಗಿತ್ತು. 

You cannot copy contents of this page