ಪೆರ್ಲ: ಕೊಚ್ಚಿಯಲ್ಲಿ ನಡೆದ ಮಲಯಾಳಿ ಮಾಸ್ಟರ್ಸ್ ರಾಜ್ಯ ಅತ್ಲೆಟಿಕ್ ಮೀಟ್‌ನಲ್ಲಿ ಮಣಿಯಂಪಾರೆ ನಿವಾಸಿ ಆಯಿಷತ್ ತಾಹಿರ ನಾಲ್ಕು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕದೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದಾರೆ. ಹಿರಿಯ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಿದ ಆಯಿಷತ್ ತಾಹಿರ ೩೧.4೦ ಸೆಕೆಂಡ್‌ನಲ್ಲಿ ೨೦೦ ಮೀಟರ್ ಓಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. 4೦೦ ಮೀಟರ್ ಓಟದಲ್ಲೂ, ೪೧೦೦ ಮೀಟರ್ ರಿಲೇಯಲ್ಲೂ, 44೦೦ ಮೀಟರ್ ರಿಲೇಯಲ್ಲೂ ಇವರು ಚಿನ್ನದ ಪದಕ ಗಳಿಸಿದ್ದಾರೆ. 1೦೦ ಮೀಟರ್ ಓಟದಲ್ಲಿ ಬೆಳ್ಳಿ ಪದಕ ಲಭಿಸಿದೆ. ಈ ಉತ್ತಮ ಸಾಧನೆ ನಡೆಸಿ ಜಿಲ್ಲೆಗೆ ಹೆಮ್ಮೆ ತಂದ ತಾಹಿರಾರನ್ನು ಶೇಣಿ ಮಣಿಯಂಪಾರೆ ಕಿಂಗ್‌ಸ್ಟಾರ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಲಬ್ ಕಾರ್ಯದರ್ಶಿ ಸದಾನಂದನ್, ಕೋಶಾಧಿಕಾರಿ ಮುನಾಸಿರ್, ಇತರ ಪದಾಧಿಕಾರಿಗಳು ಭಾಗವಹಿಸಿದರು.






