ಬೇವಿಂಜದಲ್ಲಿ 3 ಲಕ್ಷ ರೂ. ಮೌಲ್ಯದ ವಿದ್ಯುತ್ ವಯರ್ ಸಾಗಾಟ: ಹಲವು ಕಾಲದಿಂದ ಬೈಕ್‌ಗಳಲ್ಲಿ ಸಂಚರಿಸಿದ ಕಳವು: ಇಬ್ಬರು ಸೆರೆ

ಕಾಸರಗೋಡು: ಚೆರ್ಕಳ, ಬೇವಿಂಜದಲ್ಲಿ ನಿರ್ಮಾಣದಲ್ಲಿರುವ ಮನೆಯಿಂದ ಮೂರು ಲಕ್ಷ ರೂ. ಮೌಲ್ಯದ ವಿದ್ಯುತ್ ವಯರ್‌ಗಳನ್ನು ಸಾಗಿಸಿದ ಪ್ರಕರಣದಲ್ಲಿ ಇಬ್ಬರು ಸೆರೆಯಾಗಿದ್ದಾರೆ. ಬೇಕಲ, ಪಳ್ಳಿಕ್ಕೆರೆ, ತೊಟ್ಟಿ, ಕಿಳಕ್ಕೇಕರದ  ರತೀಶ್ (36), ಶ್ರುತಿ ನಿವಾಸ್‌ನ ಕರುಣಾಕರನ್ (64)ನನ್ನು ವಿದ್ಯಾನಗರ ಪೊಲೀಸರು ಸೆರೆ ಹಿಡಿದಿದ್ದಾರೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸೆಪ್ಟಂಬರ್ 17ರಂದು ರಾತ್ರಿ ಹಾಗೂ ೧೮ರ ಬೆಳಿಗ್ಗೆ ಮಧ್ಯೆ ಕಳವು ನಡೆಸಲಾಗಿದೆ. ಬೇವಿಂಜದ ಎಂ.ಟಿ ಅಬ್ದುಲ್ ಕಬೀರ್ ಎಂಬವರು ನಿರ್ಮಿಸುತ್ತಿರುವ ಮನೆಯಿಂದ ಕಳವು ನಡೆಸಲಾಗಿದೆ. ಬೈಕ್‌ನಲ್ಲಿ ತಲುಪಿದ ತಂಡ ಮನೆಯೊಳಗಿನಿಂದ ವಯರ್‌ಗಳನ್ನು ಸಾಗಿಸಿದೆ. ಮೊಬೈಲ್ ಲೊಕೇಶನ್, ಗುಜರಿ ಅಂಗಡಿಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ಆರೋಪಿಗಳನ್ನು ಗುರುತು ಹಚ್ಚಲಾಗಿದೆ. ಮರದ ಕೆಲಸದವರಾಗಿದ್ದಾರೆ ಸೆರೆಯಾದ ಆರೋಪಿಗಳು.

RELATED NEWS

You cannot copy contents of this page