ಉಪ್ಪಳ: ಮಂಗಲ್ಪಾಡಿ ಪಂಚಾಯತ್ನ ಮಣ್ಣಂಗುಳಿಯಲ್ಲಿ ಅಜ್ಞಾತ ಪ್ರಾಣಿಯೊಂದು ಕಂಡುಬಂ ದಿರುವುದಾಗಿ ವರದಿಯಾಗಿದೆ. ಚಿರತೆಯಾಗಿದೆಯೆಂದು ಸಂಶಯಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಜಾಗ್ರತಾ ನಿರ್ದೇಶ ನೀಡಿದ್ದಾರೆ. ಮಂಗಲ್ಪಾಡಿ, ಕರವೂರು ರಸ್ತೆಯಲ್ಲಿ ಇಂದು ಬೆಳಿಗ್ಗೆ ೬.೩೦ಕ್ಕೆ ಅಜ್ಞಾತ ಪ್ರಾಣಿ ರಸ್ತೆಗೆ ಅಡ್ಡವಾಗಿ ಓಡಿ ಸಮೀಪದ ಕಾಡಿಗೆ ನುಗ್ಗಿರುವುದಾಗಿ ಹೇಳಲಾಗುತ್ತಿದೆ. ಪುತ್ರಿಯನ್ನು ಮದ್ರಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಕರವೂರಿನ ರಫೀಕ್ ಎಂಬವರು ಅಜ್ಞಾತ ಪ್ರಾಣಿಯನ್ನು ಕಂಡಿದ್ದಾರೆ. ಅವರು ನೀಡಿದ ಮಾಹಿತಿಯಂತೆ ಸ್ಥಳೀಯರು ತಲುಪಿ ಹುಡುಕಾಡಿದರೂ ಪ್ರಾಣಿಯನ್ನು ಪತ್ತೆಹಚ್ಚಲಾಗಲಿಲ್ಲ. ಪ್ರಾಣಿ ಚಿರತೆಯಂತೆ ಕಾಣುತ್ತಿತ್ತೆಂದು ರಫೀಕ್ ಸ್ಥಳೀಯರಲ್ಲಿ ತಿಳಿಸಿದ್ದಾರೆ. ಈ ವಿಷಯವನ್ನು ಕೈಕಂಬದ ಮೆಹಮೂದ್ ಎಂಬವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ ಅದು ಚಿರತೆಯಾಗಿರಲು ಸಾಧ್ಯತೆಯಿಲ್ಲವೆಂದು ಅರಣ್ಯಾಧಿಕಾ ರಿಗಳು ತಿಳಿಸಿದ್ದು ಆದರೂ ಜಾಗ್ರತೆ ಪಾಲಿಸುವಂತೆ ಕರೆ ನೀಡಲಾಗಿದೆ.






