ನಿಷೇಧಿತ ಹೊಗೆಸೊಪ್ಪು ಉತ್ಪನ್ನ ಸಹಿತ ಕಾಸರಗೋಡು ನಿವಾಸಿ ಕಣ್ಣೂರಿನಲ್ಲಿ ಸೆರೆ

ಕಣ್ಣೂರು: ಕರ್ನಾಟಕದಿಂದ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ನಿಷೇಧಿತ ಹೊಗೆಸೊಪ್ಪು ಉತ್ಪನ್ನಗಳನ್ನು ತಂದು ವಿತರಿಸುವ ಯುವಕನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಕಾಸರಗೋಡು ನಿವಾಸಿಯಾದ ಹನೀಫ (37)ನನ್ನು ವಾಹನ ಸಹಿತ ಸೆರೆ ಹಿಡಿಯಲಾಗಿದೆ. ನಿನ್ನೆ ಮುಂಜಾನೆ  ಕಣ್ಣೂರು ಪಳ್ಳಿಕುನ್ನುನಲ್ಲಿ ಸೆರೆ ಹಿಡಿಯಲಾಗಿದೆ. ಮಂಗಳೂರಿನಿಂದ ಎರ್ನಾಕುಳಂವರೆಗಿರುವ  ವಿವಿಧ ಪ್ರದೇಶಗಳಿಗೆ ನಿಷೇಧಿತ ಹೊಗೆಸೊಪ್ಪು ಉತ್ಪನ್ನಗಳನ್ನು ತಲುಪಿಸುವ ವ್ಯಕ್ತಿ  ಈತನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.  ನಿರಂತರವಾಗಿ ಹೊಗೆಸೊಪ್ಪು ಉತ್ಪನ್ನಗಳನ್ನು ಸಾಗಿಸುತ್ತಿರುವುದಾಗಿ ಲಭಿಸಿದ ರಹಸ್ಯ ಮಾಹಿತಿ ಹಿನ್ನೆಲೆಯಲ್ಲಿ ಕಣ್ಣೂರು ಸಿಟಿ ಪೊಲೀಸ್ ಕಮಿಷನರ್ ಈತನ ಮೇಲೆ ನಿಗಾ ಇರಿಸಿದ್ದು, ಇದರ ಆಧಾರದಲ್ಲಿ ನಿನ್ನೆ ವಾಹನ ಸಹಿತ ಆರೋಪಿಯನ್ನು ಬೆನ್ನಟ್ಟಿ ಸೆರೆ ಹಿಡಿಯಲಾಗಿದೆ. ಈತನಿಂದ ೩೨೫ರಷ್ಟು ಪ್ಯಾಕೆಟ್‌ಗಳಲ್ಲಿ ವಿವಿಧ ರೀತಿಯ ನಿಷೇಧಿತ ಹೊಗೆಸೊಪ್ಪು ಉತ್ಪನ್ನಗಳನ್ನು ವಶಕ್ಕೆ ಪಡೆಯಲಾಗಿದೆ.

RELATED NEWS

You cannot copy contents of this page