ಬಾಡೂರು: ನೂರು ವರ್ಷಗಳ ಹಿಂದಿನ ದೇಶದ ಸ್ಥಿತಿಗತಿಗಳು, ಸಮಾಜ ಹೇಗಿತ್ತು ಎನ್ನುವುದರ ಕುರಿತಾಗಿ ಅವಲೋಕನ ಮಾಡಿದರೆ ಕಳೆದ ನೂರು ವರ್ಷಗಳಲ್ಲಿ ರಾ.ಸ್ವ.ಸೇ. ಸಂಘವು ಸಮಾಜದಲ್ಲಿ ಮಾಡಿದ ಪರಿವರ್ತನೆ ಏನೂಂತ ಅರಿವಾದೀತು ಎಂದು ರಾ.ಸ್ವ.ಸೇ. ಸಂಘ ಕಣ್ಣೂರು ವಿಭಾಗ್ ಕಾರ್ಯವಾಹ್ ಲೋಕೇಶ್ ಜೋಡುಕಲ್ಲು ನುಡಿದರು.
ಬಾಡೂರಿನಲ್ಲಿ ಜರಗಿದ ರಾ.ಸ್ವ.ಸೇ. ಸಂಘ ಪುತ್ತಿಗೆ ಮಂ ಡಲದ ವಿಜಯದಶಮಿ ಪಥಸಂಚ ಲನದ ಸಾರ್ವಜನಿಕ ಸಮಾರಂಭ ದಲ್ಲಿ ಬೌದ್ಧಿಕ್ ನೀಡಿ ಅವರು ಮಾತನಾಡುತ್ತಿದ್ದರು. ಸಂಘ ಏನನ್ನೂ ಮಾಡಿಲ್ಲ. ಮುಂದೆ ಮಾಡುವುದೂ ಇಲ್ಲ. ಆದರೇ ಈ ದೇಶಕ್ಕೆ, ಇಲ್ಲಿನ ಜನರಿಗೆ, ಇಲ್ಲಿನ ನೆಲದ ಸಂಸ್ಕೃತಿಗೆ ಸಂಕಷ್ಟ ಬಂದಾಗ, ಅಪಾಯ ಬಂದಾಗ ತನ್ನ ಸರ್ವ ಸ್ವವನ್ನೂ ತ್ಯಾಗ ಮಾಡಿ ದೈರ್ಯ ದಿಂದ ಧಾವಿಸಿ ಬರುವ ಸ್ವಯಂ ಸೇವಕರನ್ನು ಸಿದ್ಧಗೊಳಿಸುತ್ತದೆ. ಇದು ಸಮಾಜದ ಪರಿವರ್ತನೆಯಲ್ಲಿ ಸಂಘವು ಮಾಡಿಕೊಂಡು ಬಂದಿರುವ ಕಾರ್ಯವಾಗಿದೆ ಎಂದವರು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ದೈವಾರಾಧಕ ನವೀನ್ ಕಾಶಿ ವಿಕಾಸ್ ನಗರ ಅವರು ಮಾತನಾಡುತ್ತಾ ಮಾದಕ ವ್ಯಸನಗಳಿಂದ ಮುಕ್ತವಾದ ಸಮಾಜ ನಿರ್ಮಾಣ ಆಗಬೇಕಾಗಿದೆ. ಇದೀಗ ಎಲ್ಲೆಡೆ ಕೇಳಿ ಬರುತ್ತಿರುವ ವಿವಾಹ ವಿಚ್ಛೇದನೆ ಎನ್ನುವ ವ್ಯಸನಕ್ಕೂ ತಡೆ ಹಾಕಬೇಕಾಗಿದೆ. ಸಮಾಜದಲ್ಲಿ ಸಾಮರಸ್ಯದ ಬದುಕನ್ನು ಎಲ್ಲರೂ ನಡೆಸುವಂತಾಗಬೇಕು. ಕಷ್ಟದಲ್ಲಿರು ವವರಿಗೆ ಊರುಗೋಲಾಗಿ ನಿಲ್ಲುವ ಮನೋಸ್ಥಿತಿಯ ನಿರ್ಮಾಣ ಆಗಬೇಕು ಎಂದು ಹೇಳಿದರು.
ರಾ.ಸ್ವ.ಸೇ.ಸಂ.ದ ಬದಿಯಡ್ಕ ಖಂಡ್ನ ಸಹಕಾರ್ಯವಾಹ ರಾಜೇಶ್ ಬದಿಯಡ್ಕ ಉಪಸ್ಥಿತರಿ ದ್ದರು. ಪ್ರಸಾದ್ ಮಾಸ್ತರ್ ಚೇವ ಮುಗು ನಿರೂಪಿಸಿ ದರು. ಅವಿನಾಶ್ ಅನಂತಪುರ ಸ್ವಾಗತಿಸಿ, ದೀಕ್ಷಿತ್ ಬಾಡೂರು ವಂದಿಸಿದರು. ದೇಲಂಪಾಡಿ ದೇವಸ್ಥಾನದ ಮಹಾದ್ವಾರದ ಪರಿಸರದಿಂದ ಬಾಡೂರಿಗೆ ನೂರಾರು ಮಂದಿ ಗಣವೇಷಧಾರಿ ಸ್ವಯಂ
ಸೇವಕರ ಆಕರ್ಷಕ ಪಥಸಂಚಲನ ನಡೆಯಿತು.







