ಕಾಸರಗೋಡು: ಮಧೂರು ಸಮೀಪದ ಕೊಲ್ಯ ರಸ್ತೆ ಬದಿ ಬೇಳ ಬಿರ್ಮಿನಡ್ಕ ನಿವಾಸಿ ಚೌಕಾರು ಬಿ ಯಾನೆ ಸಂಜೀವ (60)ಎಂಬವರು ನಿನ್ನೆ ಬೆಳಿಗ್ಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿದ್ಯಾನಗರ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿದರು. ಹೃದಯಾಘಾತದಿಂದ ಸಾವು ಸಂಭವಿಸಿರಬಹುದೆಂದು ಸಂಶಯಿಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಕೂಲಿ ಕಾರ್ಮಿಕನಾದ ಸಂಜೀವ ಕೆಲವು ವರ್ಷಗಳಿಂದ ಬಿರ್ಮಿನಡ್ಕದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು.
ಮೃತರು ಪತ್ನಿ ಸುಂದರಿ, ಮಕ್ಕಳಾದ ಶೈಲಜ, ಜಯರಾಮ, ಸಂತೋಷ್, ಗಣೇಶ್, ಸತೀಶ್, ಹರೀಶ್, ರಾಜೇಶ್, ಶಾಲಿನಿ, ಅಳಿಯ ಕುಶ, ಸಹೋದರ ಐತಪ್ಪ, ಸಹೋದರಿ ಕಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ






