ಮಂಜೇಶ್ವರ: ಹೊಸಬೆಟ್ಟು ನಿವಾಸಿ ದಿ| ಸುಂದರ ರವರ ಪತ್ನಿ ಕಮಲಾ (66) ನಿಧನ ಹೊಂದಿದರು. ಕರ್ನಾಟಕದ ಮೂಡಿಗೆರೆಯ ಕಾಫಿ ತೋಟದಲ್ಲಿ ನೌಕರೆಯಾಗಿದ್ದು, ನಿವೃತ್ತಿ ಪಡೆದ ಬಳಿಕ ಮಂಜೇಶ್ವರದ ಹೊಸಬೆಟ್ಟು ನಲ್ಲಿ ಕುಟುಂಬ ಸದಸ್ಯರ ಜೊತೆ ವಾಸಿಸುತಿದ್ದರು. ಮೃತರು ಮಕ್ಕಳಾದ ನಾರಾಯಣ, ಸುರೇಂದ್ರ, ನೇತ್ರಾವತಿ, ಚೈತ್ರಾ, ಸಹೋದರರಾದ ದಾಮೋದರ (ಅರಣ್ಯ ಇಲಾಖೆಯ ನಿವೃತ್ತ ಉದ್ಯೋಗಿ), ಎಚ್.ಎಂ. ಪೂವಪ್ಪ (ನಿವೃತ್ತ ಪೊಲೀಸ್ ಸಬ್ಇನ್ಸ್ಪೆಕ್ಟರ್) ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.






