ಕಣಿಪುರ ಕ್ಷೇತ್ರಕ್ಕೆ ತಲುಪುವ ಭಕ್ತಜನರಿಗೆ ವ್ಯಾಪಾರಿ ಒಕ್ಕೂಟದಿಂದ ಸಿಹಿ ಪಾನೀಯ ವಿತರಣೆ
ಕುಂಬಳೆ: ಕಣಿಪುರ ಶ್ರೀ ಗೋಪಾ ಲಕೃಷ್ಣ ದೇವಸ್ಥಾನದ ನವೀಕರಣೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ತಲುಪುವ ಭಕ್ತಜನರಿಗೆ ಕುಂಬಳೆ ಹೈಟೆಕ್ ಸ್ಟ್ರೀಟ್ ವ್ಯಾಪಾರಿ ಒಕ್ಕೂಟದ ವತಿಯಿಂದ ಪಾನೀಯ ವಿತರಿಸಲಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದಾಗಿ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಇಲ್ಲಿದೆ ತಲುಪಿದ್ದಾರೆ. ಬದಿಯಡ್ಕ ರಸ್ತೆ ಮೂಲಕ ಸಾಗುವ ಶೋಭಾಯಾತ್ರೆಗೆ ವ್ಯಾಪಾರಿ ಒಕ್ಕೂಟದ ವತಿಯಿಂದ ಸಿಹಿ ಪಾನೀಯ ವಿತರಿಸಲಾಗಿದೆ. ಇಂದು ಕೂಡಾ ಇದು ಮುಂದುವರಿಯಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.