ಬಿಎಂಎಸ್ ಜಿಲ್ಲಾ ಸಮ್ಮೇಳನ ನಾಳೆಯಿಂದ: ನಗರದಲ್ಲಿ ಡಂಗುರ ಜಾಥಾ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಸಮ್ಮೇಳನ ನಾಳೆ, 25ರಂದು ಕಾಸರಗೋಡಿನಲ್ಲಿ ನಡೆಯಲಿದೆ. ನಾಳೆ ಬೆಳಿಗ್ಗೆ ೯.೩೦ಕ್ಕೆ ಜಿಲ್ಲೆಯ ೩೮ ಪಂಚಾಯತ್‌ಗಳಿಂದ ಹಾಗೂ ಮೂರು ನಗರಸಭೆಗಳಿಂದಾಗಿ 1೦,೦೦೦ ಕಾರ್ಮಿಕರು ಭಾಗವಹಿಸುವ ಮೆರವಣಿಗೆಯೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಬಳಿಕ ನಡೆಯುವ ಸಾರ್ವಜನಿಕ ಸಮ್ಮೇಳನವನ್ನು ರಾಜ್ಯ ಕಾರ್ಯದರ್ಶಿ ಕೆ.ವಿ. ಮಧುಕುಮಾರ್ ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ಉಪೇಂದ್ರ ಕೆ. ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ರಾಜ್ಯ ಡೆಪ್ಯುಟಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರನ್, ರಾಜ್ಯ ಉಪಾಧ್ಯಕ್ಷ ಅಡ್ವಕೇಟ್ ಪಿ. ಮುರಳೀಧರನ್ ಮಾತನಾಡುವರು. ಅಪರಾಹ್ನ ಜಿಲ್ಲಾ ಪದಾಧಿಕಾರಿಗಳ ಸಭೆ ನಡೆಯಲಿದೆ.

25ರಂದು ಬೆಳಿಗ್ಗೆ 1೦ ಗಂಟೆಗೆ ಆರ್.ಕೆ. ಮಾಲ್‌ನಲ್ಲಿ ಪ್ರತಿನಿಧಿಗಳ ಸಭೆ ನಡೆಯಲಿದೆ. ಜಿಲ್ಲಾಧ್ಯಕ್ಷ ಉಪೇಂದ್ರನ್ ಕೆ. ಅಧ್ಯಕ್ಷತೆ ವಹಿಸುವರು. ಅಖಿಲ ಭಾರತ ಉಪಾಧ್ಯಕ್ಷ ಉಣ್ಣಿಕೃಷ್ಣನ್ ಉಣ್ಣಿತ್ತಾನ್ ಉದ್ಘಾಟಿಸುವರು. ಆರ್‌ಎಸ್‌ಎಸ್ ಜಿಲ್ಲಾ ಸಂಘ ಚಾಲಕ್ ಪ್ರಭಾಕರನ್ ಮಾಸ್ತರ್, ಸ್ವಾಗತಸಮಿತಿ ಅಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ ಮಾತನಾಡುವರು. ರಾಜ್ಯ ಡೆಪ್ಯುಟಿ ಜನರಲ್ ಸೆಕ್ರೆಟರಿ ಸಿ. ಬಾಲಚಂದ್ರನ್, ರಾಜ್ಯ ಉಪಾಧ್ಯಕ್ಷರಾದ ನ್ಯಾಯವಾದಿ ಪಿ. ಮುರಳೀಧರನ್ ಕಾಸರಗೋಡು, ನ್ಯಾಯವಾದಿ ಪಿ. ಮುರಳೀಧರನ್ ಕಲ್ಲಿಕೋಟೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ. ಮಹೇಶ್ ಕುಮಾರ್ ಭಾಗವಹಿಸುವರು. ನೂತನ ಜಿಲ್ಲಾ ಪದಾಧಿಕಾರಿಗಳ ಆಯ್ಕೆಯೊಂದಿಗೆ ಸಮ್ಮೇಳನ ಸಮಾಪ್ತಿಗೊಳ್ಳಲಿದೆ. ಕಾರ್ಯಕ್ರಮದ ಬಗ್ಗೆ ವಿವರಿಸಲು ನಡೆಸಿದ ಸುದ್ಧಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಉಪೇಂದ್ರನ್ ಕೆ, ಜಿಲ್ಲಾ ಕಾರ್ಯದರ್ಶಿ ಬಾಬು ಕೆ.ವಿ, ಜಿಲ್ಲಾ ಜೊತೆ ಕಾರ್ಯ ದರ್ಶಿ ದಿನೇಶ್ ಪಿ, ರಾಜ್ಯ ಸಮಿತಿ ಸದಸ್ಯ ವಿ.ವಿ. ಬಾಲಕೃಷ್ಣನ್, ಟಿ. ಕೃಷ್ಣನ್ ಭಾಗವಹಿಸಿದರು. ಸಮ್ಮೇಳನದಂ ಗವಾಗಿ ನಿನ್ನೆ ನಗರದಲ್ಲಿ ಡಂಗುರ ಮೆರವಣಿಗೆ ನಡೆಸಲಾಯಿತು.

RELATED NEWS

You cannot copy contents of this page