ಕೆಎಸ್‌ಇಬಿಯ ರಾಜ್ಯದ ಪ್ರಥಮ ಬೆಸ್ ಮುಳ್ಳೇರಿಯದಲ್ಲಿ ಸಿದ್ಧ

ಮುಳ್ಳೇರಿಯ: ಕೆಎಸ್‌ಇಬಿಯ ರಾಜ್ಯದ ಮೊದಲ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (ಬೆಸ್) ಮುಳ್ಳೇರಿಯದಲ್ಲಿ ಸಿದ್ಧಗೊಂಡಿದೆ. 15 ಮೆಗಾವಾಟ್ ಸಾಮರ್ಥ್ಯದ ಬೆಸ್ ಯೂನಿಟ್‌ನ ನಿರ್ಮಾಣ ಕಳೆ ದೊಂದು ವರ್ಷದಿಂದ ಪೂರ್ತಿಗೊಳಿ ಸಲಾಗಿದೆ. ಮುಳ್ಳೇರಿಯ ಸಬ್ ಸ್ಟೇಶನ್‌ಗೆ ಹೊಂದಿಕೊಂಡಿರುವ ಕೆಎಸ್‌ಇಬಿಯ ಒಂದು ಎಕ್ರೆ ಸ್ಥಳದಲ್ಲಿ ಬೆಸ್ ಸ್ಥಾಪಿಸಲಾಗಿದೆ. 14 ಕಂಟೈನರ್ ಬ್ಯಾಟ್ರಿ, 7 ಪವರ್ ಕನ್ವರ್ಟರ್ ಸಿಸ್ಟಮ್ ಸೇರಿದುದಾಗಿದೆ ಬೆಸ್. ಎರಡು ಟ್ರಾನ್ಸ್‌ಫಾರ್ಮ್‌ಗಳು ಇದರಲ್ಲಿ ಒಳಗೊಂಡಿವೆ.

ನಿರ್ಮಾಣ ಪೂರ್ತಿಗೊಳಿಸಿ ಪರೀಕ್ಷಾರ್ಥವಾಗಿ ವಿತರಣೆ ಆರಂಭಗೊಂಡಿದೆ. ಕಳೆದ ಎರಡು ದಿನದಿಂದ ರಾತ್ರಿ ಸಮಯದಲ್ಲಿ 60 ಮೆಗಾವಾಟ್‌ನಂತೆ ವಿದ್ಯುತ್ ಇದರಿಂದ ಲಭಿಸಿದೆ. ಕೆಎಸ್‌ಇಬಿಯ ಕಳಮಶ್ಶೇರಿಯ ರಾಜ್ಯ ಲೋಡ್ಸ್ ಪ್ಯಾಚ್ ಕೇಂದ್ರದಿಂದಿರುವ ಅನುಮತಿ ಲಭಿಸಿದ ಕೂಡಲೇ ಇದನ್ನು ಲೋಕಾರ್ಪಣೆಗೊಳಿಸಲಾಗುವುದು.

15 ಮೆಗಾವಾಟ್ ವಿದ್ಯುತ್ ನಾಲ್ಕು ಗಂಟೆಯಂತೆ ಲಭಿಸುವ ರೀತಿಯಲ್ಲಿ ಬೆಸ್‌ನ ಚಟುವಟಿಕೆ ಇರಲಿದೆ. ರಾಜ್ಯದಲ್ಲಿ ವಿದ್ಯುತ್ ಉಪಯೋಗ ಹೆಚ್ಚುತ್ತಿದ್ದು, ನಿಯಂತ್ರಣ ಏರ್ಪಡಿಸಬೇಕಾಗುತ್ತಿರುವ ಈ ಸಂದ ರ್ಭದಲ್ಲಿ ಬೆಸ್ ಸಾಹಾಕಗೊಳ್ಳುತ್ತಿರು ವುದು ಕೆಎಸ್‌ಇಬಿಗೆ ಹಾಗೂ ಗ್ರಾಹಕರಿಗೆ ದೊಡ್ಡ ಆಶ್ವಾಸ ನೀಡಲಿದೆ. ಕೇಂದ್ರ ಸರಕಾರದ ಅಧೀನದಲ್ಲಿರುವ ನ್ಯಾಶನಲ್ ಹೈಡ್ರೋ ಪವರ್ ಕಾರ್ಪೊರೇಶನ್‌ನ ಅಡಿಯಲ್ಲಿ ಬೆಸ್ ಯೋಜನೆ ಜ್ಯಾರಿಗೊಳಿಸಲಾಗುತ್ತಿದೆ. ಗುಜರಾತ್ ಕೇಂದ್ರವಾದ ಒಪೇರ ಗ್ರೀನ್ ಯಾನ ಪ್ರೈವೆಟ್ ಲಿಮಿಟೆಡ್ ಎಂಬ ಕಂಪೆನಿ ನಿರ್ಮಾಣ ಪೂರ್ತಿಗೊಳಿಸಿದೆ.

ಹಗಲು ಸಮಯಗಳಲ್ಲಿ ಲಭಿಸುವ ಹೆಚ್ಚುವರಿ ವಿದ್ಯುತ್ ಬ್ಯಾಟರಿಯಲ್ಲಿ ಸಂಗ್ರಹಿಸಿ ರಾತ್ರಿ ಉಪಯೋಗ ಹೆಚ್ಚುವ ಸಂದರ್ಭಗಳಲ್ಲಿ ಕೆಎಸ್‌ಇಬಿಗೆ ಹಿಂತಿರುಗಿಸುವ ರೀತಿಯಲ್ಲಿ ಯೋಜನೆಗೆ ರೂಪು ನೀಡಲಾಗಿದೆ. ಹಗಲು ಸಮಯಗಳಲ್ಲಿ ಅಲ್ಪ ಬೆಲೆಗೆ ಕೆಎಸ್‌ಇಬಿ ಕೇಂದ್ರ ಗ್ರಿಡ್‌ನಿಂದ ವಿದ್ಯುತ್ ಖರೀದಿಸುತ್ತಿದೆ. ಅಂಬಲತ್ತರ ಹಾಗೂ ಪೈವಳಿಕೆಯ ಸೌರಶಕ್ತಿ ಇಂಧನ ಪಾರ್ಕ್‌ನಿಂದಿರುವ ವಿದ್ಯುತ್ತನ್ನು ಕೂಡಾ ಇಲ್ಲಿ ಸಂಗ್ರಹಿಸಿಡಬಹುದಾಗಿದೆ. ರಾತ್ರಿ ನೀಡುವ ವಿದ್ಯುತ್‌ಗೆ ಒಪೇರ ಕಂಪೆನಿಗೆ ಯೂನಿಟ್ 1ಕ್ಕೆ 4.38 ರೂ.ನಂತೆ ಕೆಎಸ್‌ಇಬಿ ನೀಡಬೇಕಾಗಿದೆ. ಈಗ ರಾತ್ರಿ ಹೆಚ್ಚುವರಿ ಬೆಲೆಗೆ ಕೆಎಸ್‌ಇಬಿ ಹೊರಗಿನಿಂದ ವಿದ್ಯುತ್ ಖರೀದಿಸುತ್ತಿದೆ. ಬೆಸ್ ಆರಂಭವಾಗುವುದರೊಂದಿಗೆ ದೊಡ್ಡ ಮಟ್ಟಿನ ಲಾಭ ಕೆಎಸ್‌ಇಬಿಗೆ ಉಂಟಾಗಲಿದೆ. ಉಚಿತವಾಗಿ ಸ್ಥಳ ನೀಡಿದುದಲ್ಲದೆ ಇದಕ್ಕಾಗಿ ಒಂದು ರೂಪಾಯಿ ಕೂಡಾ ಕೆಎಸ್‌ಇಬಿ ವೆಚ್ಚ ಮಾಡಲಿಲ್ಲ. ಮೈಲಾಟಿಯಲ್ಲಿ ನಿರ್ಮಿಸುವ ೧೨೫ ಮೆಗಾವಾಟ್ ಸಾಮರ್ಥ್ಯದ ಬೆಸ್‌ನ ನಿರ್ಮಾಣ ಪ್ರಥಮವಾಗಿ ಪೂರ್ತಿಗೊಳಿಸಲು ಉದ್ದೇಶಿಸಲಾಗಿತ್ತಾದರೂ ಅಲ್ಲಿಗೆ ಇನ್ನೂ ಕೂಡಾ ಬ್ಯಾಟರಿ ತಲುಪಿಲ್ಲ.

ಚೈನದಿಂದ ಆಮದು ಮಾಡುವ ಬ್ಯಾಟರಿ ಘಟಕವನ್ನು ಇದಕ್ಕಾಗಿ ಉಪಯೋಗಿಸಲಾಗುವುದು. ಇದೇ ವೇಳೆ ಒಪ್ಪಂದ ಸಮಯದೊಳಗೆ ಮುಳ್ಳೇರಿಯದಲ್ಲಿ ನಿರ್ಮಾಣ ಪೂರ್ತಿ ಗೊಂಡಿದೆ. ಒಂದು ತಿಂಗಳೊಳಗೆ ಇದರ ಉದ್ಘಾಟನೆ ಉಂಟಾಗಬಹು ದೆಂಬ ಸೂಚನೆಯಿದೆ. ಸುತ್ತುಬೇಲಿ ಸ್ಥಾಪಿಸುವುದು ಮೊದಲಾದ ಸಣ್ಣ ಕೆಲಸಗಳು ಮಾತ್ರವೇ ಇಲ್ಲಿ ಬಾಕಿಯಿದೆ.

RELATED NEWS

You cannot copy contents of this page