ವಂದೇ ಮಾತರಂ ವಿವಾದ ಕೇಂದ್ರೀಯ ವಿವಿಯ ವಿದ್ಯಾರ್ಥಿಗಳ ಅಮಾನತು ಹಿಂತೆಗೆತ

ಕಾಸರಗೋಡು: ಕೇರಳ ಕೇಂದ್ರೀಯ ವಿವಿಯಲ್ಲಿ ಅಕ್ಟೋಬರ್ ೬ರಂದು ವಂದೇ ಮಾತರಂನ ೧೫೦ನೇ ವಾರ್ಷಿಕದಂಗವಾಗಿ ನಡೆದ ದ್ವಿದಿನ ರಾಷ್ಟ್ರೀಯ ವಿಚಾರಗೋಷ್ಠಿಯ ವೇಳೆ ಪ್ರತಿಭಟಿಸಿ ತಡೆಯಲೆತ್ನಿಸಿದ ಘಟನೆಗೆ ಸಂಬಂಧಿಸಿ ಶಿಸ್ತು ಕ್ರಮವೆಂಬಂತೆ ಅನಿರ್ದಿಷ್ಟ ಕಾಲ ಅಮಾನತುಗೊಳಿಸಲ್ಪಟ್ಟ ವಿವಿಯ ಐವರು ವಿದ್ಯಾರ್ಥಿ ಗಳ ಅಮಾನತು ಕ್ರಮವನ್ನು ನಿನ್ನೆ ಹಿಂತೆಗೆದುಕೊಳ್ಳಲಾಗಿದೆ.

ಪ್ರತಿಭಟನೆಗೆ ಸಂಬಂಧಿಸಿ ವಿವಿಯ ಎಸ್‌ಎಫ್‌ಐ ಘಟಕ ಕಾರ್ಯದರ್ಶಿ ಎಸ್. ಸಯ್ಯದ್ ಅಲಿ, ಸೆಕ್ರೆಟರಿ ಯೇಟ್ ಸದಸ್ಯ ವಿ.ಬಿ. ಆವೇದ್, ಎನ್‌ಎಸ್‌ಯು ಮುಖಂಡ ಯಾಸಿನ್, ಎಂಎಸ್‌ಎಫ್ ಮುಖಂಡರಾದ ಶಬೀರ್ ತಖಿಯುದ್ದೀನ್ ಎಂಬಿವರನ್ನು ಅಮಾನತುಗೊಳಿ ಸಲಾಗಿತ್ತು. ಆ ಬಗ್ಗೆ ವಿವಿ ಮಟ್ಟದ ತನಿಖೆ ನಡೆದಿತ್ತು. ತನಿಖೆಯ ಪ್ರಾಥಮಿಕ ವರದಿ ಆಧಾರದಲ್ಲಿ ವಿದ್ಯಾರ್ಥಿಗಳ ಅಮಾನತು ಕ್ರಮವನ್ನು ಹಿಂತೆಗೆದುಕೊಳ್ಳಲಾಗಿದೆ. ಅಮಾನತು ಕ್ರಮ ಹಿಂತೆಗೆದರೂ ತನಿಖೆಯನ್ನು ಮುಂದುವರಿಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. 

RELATED NEWS

You cannot copy contents of this page