ಕೇಂದ್ರೀಯ ವಿ.ವಿಯ ಆಡಳಿತ ನಿರ್ವಹಣ ಕೇಂದ್ರ ಪ್ರಧಾನಿಯಿಂದ ಆನ್‌ಲೈನ್ ಮೂಲಕ ಉದ್ಘಾಟನೆ

ಕಾಸರಗೋಡು: ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲ ಯಕ್ಕಾಗಿ ೩೮.೧೬ ಕೋಟಿ ರೂ. ವೆಚ್ಚದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ಎಂಬ ಹೆಸರಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಪ್ರಧಾನ ಆಡಳಿತ ನಿರ್ವಹಣಾ ಕೇಂದ್ರ ಕಟ್ಟಡವನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಆನ್‌ಲೈನ್ ಮೂಲಕ ಇಂದು ಬೆಳಿಗ್ಗೆ ಉದ್ಘಾಟಿಸಿದರು.

೨೨ ರಾಜ್ಯಗಳಲ್ಲಾಗಿ ೧೨,೭೪೪ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾ ಗುವ ಉನ್ನತ ಶಿಕ್ಷಣ ಸಂಸ್ಥೆಗಳ ಶಿಲಾನ್ಯಾಸ ಕ್ರಮವನ್ನೂ ಇದೇ ವೇಳೆ ಪ್ರಧಾಮಂತ್ರಿ ನಿರ್ವಹಿಸಿದರು. ಕಾರ್ಯ ಕ್ರಮದಲ್ಲಿ ಸಂಸದ ರಾಜ್‌ಮೋಹನ್  ಉಣ್ಣಿತ್ತಾನ್ ಸೇರಿದಂತೆ  ಹಲವು ಜನ ಪ್ರತಿನಿಧಿಗಳು, ಉಸ್ತುವಾರಿ ಉಪಕುಲ ಪತಿ ಪ್ರೊ. ಕೆ.ಸಿ. ಬೈಜು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು. ಕಾಸರಗೋಡು ಕೇಂದ್ರೀಯ ವಿವಿಯ ಗಂಗೋತ್ರಿ ಬ್ಲೋಕ್‌ನಲ್ಲಿ ಈಗ ಕಾರ್ಯವೆಸಗುತ್ತಿ ರುವ  ಆಡಳಿತ ನಿರ್ವಹಣಾ ಕೇಂದ್ರ ಇನ್ನು ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಾರ್ಯಾರಂಭಗೊಳ್ಳಲಿದೆ. ಇದರಲ್ಲಿ  ಕಾನ್ಫರೆನ್ಸ್ ಹಾಲ್ ಕೂಡಾ ಒಳಗೊಳ್ಳಲಿದೆ. ಮಾತ್ರವಲ್ಲ ರಿಜಿಸ್ಟ್ರಾರ್, ಪರೀಕ್ಷಾ ಕಂಟ್ರೋಲರ್, ಫಿನಾನ್ಸ್ ಆಫೀಸ್ ಇತ್ಯಾದಿ  ಶಾಸನಾತ್ಮಕ ಅಧಿ ಕಾರಿಗಳ ಕಚೇರಿಗಳು, ಅಕಾಡೆಮಿಕ್, ಅಡ್ಮಿನಿಸ್ಟ್ರೇಟಿವ್, ಫಿನಾನ್ಸ್, ಎಕ್ಸಾಮ್, ಸೆಂಟರ್ ಪರ್ಚೇಸ್ ಇತ್ಯಾದಿ ಸೆಕ್ಷನ್‌ಗಳು ಈ ಹೊಸ ಕಟ್ಟಡದಲ್ಲಿ ಒಳಗೊಂಡಿದೆ.  ವಿಕಲಚೇತನ ಸೌಹಾರ್ದ ಕಟ್ಟಡ, ಲಿಫ್ಟ್, ವೈಫೈ ಮತ್ತು ಪಾರ್ಕಿಂಗ್ ಸೌಕರ್ಯಗಳೂ ಇದರಲ್ಲಿ ಒಳಗೊಂಡಿದೆ.

Leave a Reply

Your email address will not be published. Required fields are marked *

You cannot copy content of this page