ಕಾಸರಗೋಡು: ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 1.300 ಕಿಲೋ ಗಾಂಜಾ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಹೊಸದುರ್ಗ ಕುಶಾಲನಗರ ಮರುಸು ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಶಂಶೀರ್ ಎಂ.ಜೆ.(೩೦) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಮಾಲು ಸಾಗಿಸಲು ಉಪಯೋಗಿಸಲಾದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಹೊಸದುರ್ಗ ರೈಲು ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಹೊಸದುರ್ಗ ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಸನ್ನ ಕುಮಾರ್ ವಿ.ವಿ.ಯವರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾಲು ಸಹಿತ ಆರೋಪಿಯನ್ನು ಬಂಧಿಸಲಾಗಿದೆ. ಮಾಲು ಸಾಗಿಸುತ್ತಿರುವ ಬಗ್ಗೆ ಕಾಸರಗೋಡು ಇ.ಐ. ಆಂಡ್ ಐ ಬಿ ತಂಡಕ್ಕೆ ಗುಪ್ತ ಮಾಹಿತಿ ಲಭಿಸಿತು. ಅದರ ಜಾಡು ಹಿಡಿದು ಅಬಕಾರಿ ಕಾರ್ಯಾಚರಣೆ ನಡೆಸಲಾಗಿದೆ.
ಇ.ಐ ಆಂಡ್ ಐ.ಬಿ ಯ ಕಾಸರಗೋಡು ಎಕ್ಸೈಸ್ ಇನ್ಸ್‌ಪೆಕ್ಟರ್ ಸುಬಿನ್‌ರಾಜ್ ಕೆ, ಅಸಿಸ್ಟೆಂಟ್ ಎಕ್ಸೈಸ್‌ಇನ್ಸ್‌ಪೆಕ್ಟರ್ (ಗ್ರೇಡ್) ಸುಧೀಂದ್ರನ್ ಎಂ.ವಿ, ಪ್ರಿವೆಂಟೀವ್ ಆಫೀಸರ್ ಮೊಹಮ್ಮದ್ ಕಬೀರ್, ಹೊಸದುರ್ಗ ಎಕ್ಸೈಸ್ ಸರ್ಕಲ್ ಕಚೇ ರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಎಂ. ರಾಜೀವನ್, ಪ್ರಿವೆಂಟಿವ್ ಆಫೀಸರ್‌ಗಳಾದ ಉಣ್ಣಿಕೃಷ್ಣನ್ ಕೆ. ಜೋಸೆಫ್ ಅಗಸ್ಟಿನ್, ಗ್ರೇಡ್ ಪ್ರಿವೆಂಟಿವ್ ಆಫೀಸರ್‌ಗಳಾದ ಮನೋಜ್ ಪಿ, ಗೀತ ಟಿ.ವಿ, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಅರುಣ್ ಆರ್.ಕೆ, ಶ್ಯಾಮ್‌ಜಿತ್ ಎಂ, ಅತುಲ್ ಟಿ.ವಿ, ಮೈಕಲ್ ಜೋಸೆಫ್ ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.






