ಮನೆಯ ಇಲೆಕ್ಟ್ರಿಕ್ ಕೆಲಸಕ್ಕೆ ಹೋದ ವ್ಯಕ್ತಿಯ  ಗುಪ್ತಾಂಗಕ್ಕೆ ತುಳಿದು ಗಾಯಗೊಳಿಸಿದ ಬಗ್ಗೆ ದೂರು

ಕುಂಬಳೆ: ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿ ಇಲೆಕ್ಟ್ರೀಶ್ಯನ್‌ನ ಗುಪ್ತಾಂಗಕ್ಕೆ  ತುಳಿದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ.  ಬಂಬ್ರಾಣ ಮೂವಂ ಹೌಸ್‌ನ ಮುಹಮ್ಮದ್ ಅಸಾಫ್ (23) ಗಾಯಗೊಂಡಿದ್ದು, ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉಪ್ಪಳ ಪತ್ವಾಡಿಯ  ಮನೆಯೊಂ ದರಲ್ಲಿ ಇಲೆಕ್ಟ್ರೀಶ್ಯನ್ ಕೆಲಸಕ್ಕಾಗಿ ಮುಹಮ್ಮದ್ ಅಸಾಫ್ ತೆರಳಿದ್ದರು. ಏಣಿಯಲ್ಲಿ ಹತ್ತಿ ನಿಂತು ಎತ್ತರ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಕೆಳಗೆ ಏಣಿ ಹಿಡಿದು ಸಹಾಯಕನಾಗಿ ಬೇರೊಬ್ಬ ನಿಂತಿದ್ದನು.  ಈಮಧ್ಯೆ ಅಲ್ಲಿಗೆ ತಲುಪಿದ ಮನೆ ಮಾಲಕ ಕೆಳಗೆ ಇಳಿದು ಬರುವಂತೆ ಮುಹಮ್ಮದ್ ಅಸಾಫ್‌ನೊಂದಿಗೆ ತಿಳಿಸಿದ್ದನೆಂದು ಹೇಳಲಾಗುತ್ತಿದೆ. ಎತ್ತರದಲಿ ನಿಂತು ಕೆಲಸ ನಡೆಸುತ್ತಿದ್ದೇನೆಂದೂ ಅದನ್ನು ಮುಗಿಸಿ ಕೆಳಗೆ ಬರುತ್ತೇನೆಂದು ಮುಹಮ್ಮದ್ ಅಸಾಫ್ ತಿಳಿಸಿದ್ದರು. ಇದರಿಂದ  ರೋಷಗೊಂಡ ಮನೆ ಮಾಲಕ ಮುಹಮ್ಮದ್ ಅಸಾಫ್ ಕೆಳಗೆ ಇಳಿದ ತಕ್ಷಣ   ಹಲ್ಲೆಗೈದು  ಗುಪ್ತಾಂಗಕ್ಕೆ ತುಳಿದಿರುವುದಾಗಿ ದೂರಲಾಗಿದೆ.

You cannot copy contents of this page