ಬೋವಿಕ್ಕಾನ: ಮುಳಿಯಾರಿನಲ್ಲಿ ಭೀತಿ ಹುಟ್ಟಿಸಿದ ಆಕ್ರಮಣಕಾರಿ ಕಾಡುಹಂದಿಯನ್ನು ಗುಂಡಿಕ್ಕಿ ಕೊಲೆಗೈಯ್ಯಲಾಗಿದೆ. ಮುಳಿಯಾರು ಪನ್ನಡ್ಕ ನೀರಳತ್ತಿಂಡಡಿಯಲ್ಲಿ ಶೂಟರ್ ಬಿ. ಅಬ್ದುಲ್ ಗಫೂರ್ರ ನೇತೃತ್ವದ ಸ್ಪೆಷಲ್ ತಂಡ ಹಂದಿಯನ್ನು ಗುಂಡಿಕ್ಕಿ ಕೊಲೆಗೈದಿದೆ. ಇಲ್ಲಿ ಕಾಡುಹಂದಿಗಳ ಉಪಟಳ ತೀವ್ರವಾಗಿತ್ತು. ಕೃಷಿಕರ, ದ್ವಿಚಕ್ರ ವಾಹನ ಪ್ರಯಾಣಿಕರ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ರಾತ್ರಿ ತಪಾಸಣೆ ನಡೆಸಲಾಗಿತ್ತು. ಆನರರಿ ವೈಲ್ಡ್ಲೈಫ್ ವಾರ್ಡನ್ನ ಹೊಣೆ ಇರುವ ಪಂಚಾ ಯತ್ ಅಧ್ಯಕ್ಷ ಕೆ.ಬಿ. ಮೊಹಮ್ಮದ್ ಕುಂಞಿಯವರ ನಿರ್ದೇಶ ಪ್ರಕಾರ ಮಿಷನ್ ವೈಲ್ಡ್ ಪಿಗ್ ತಪಾಸಣೆ ನಡೆಸಿದೆ. ಮುಂಜಾನೆ ಹಂದಿಯನ್ನು ಪತ್ತೆಹಚ್ಚಿರುವುದರೊಂದಿಗೆ ಶೂಟರ್ ಬಿ. ಅಬ್ದುಲ್ ಗಫೂರ್ರ ನೇತೃತ್ವದಲ್ಲಿ ರುವ ತಂಡ ತಲುಪಿ ಗುಂಡಿಕ್ಕಿದೆ. ಕ್ರಮವನ್ನು ಪೂರ್ತಿಗೊಳಿಸಿ ಹಂದಿಯ ಕಳೇಬರವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲಾಯಿತು. ಮಾಹಿತಿ ತಿಳಿದು ರೇಂಜ್ ಫಾರೆಸ್ಟ್ ಆಫೀಸರ್ ಸಿ.ವಿ. ವಿನೋದ್ ಕುಮಾರ್, ಆರ್ಆರ್ಟಿ ಡೆಪ್ಯೂಟಿ ರೇಂಜ್ ಫಾರೆಸ್ಟ್ ಆಫೀಸರ್ ಮಧುಸೂದನನ್, ಕಾರಡ್ಕ ಸೆಕ್ಷನ್ ಫಾರೆಸ್ಟರ್ ಕೆ.ಎ. ಬಾಬು, ಆರ್ಆರ್ಟಿ ಅಧಿಕಾರಿ ಬಾಬು ಪಾಣತ್ತೂರು, ಮಸೂದ್ ಬೋವಿಕ್ಕಾನ, ಅಬ್ದುಲ್ಲ ಕುಂಞಿ, ಬೀಟ್ ಫಾರೆಸ್ಟ್ ಆಫೀಸರ್ಗಳು, ಆರ್ಆರ್ಟಿ ಸದಸ್ಯರು ಸ್ಥಳಕ್ಕೆ ತಲುಪಿದ್ದರು.






