ಮಂಜೇಶ್ವರ ಬ್ಲೋಕ್ ಪಂಚಾಯತ್ ಪಿಎಂಎವೈ ಯೋಜನೆ ನಿಧಿಯಲ್ಲಿ ವಂಚನೆ: 17 ಲಕ್ಷದಷ್ಟು ರೂ. ಅಪಹರಿಸಿದ ಸೀನಿಯರ್ ಕ್ಲಾರ್ಕ್

ಮಂಜೇಶ್ವರ: ಮಂಜೇಶ್ವರ ಬ್ಲೋಕ್ ಪಂಚಾಯತ್‌ನಲ್ಲಿ ಪಿಎಂಎವೈ ಯೋಜನೆ ಫಂಡ್‌ನಲ್ಲಿ ವಂಚನೆ ನಡೆಸಿ ಸೀನಿಯರ್ ಕ್ಲರ್ಕ್ 17 ಲಕ್ಷ ರೂಪಾ ಯಿಯಷ್ಟು ಹಣವನ್ನು ಲಪಟಾಯಿಸಿ ರುವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ತೃಶೂರು ಅತ್ತಾಣಿನಗರ  ಚಿರಕ್ಕಲ್ ಗಾರ್ಡನ್ಸ್  ನಿವಾಸಿ ಸಿ.ಎನ್. ರಾಮದಾಸ್ (43) ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಾರ್ಯದರ್ಶಿ ಕೆ. ಶರೀಫ್‌ರ ದೂರಿನ ಪ್ರಕಾರ ಕೇಸು ದಾಖಲಿಸಲಾಗಿದೆ. ಕಳೆದ ಸೆ. 24ರಿಂದ ಅಕ್ಟೋಬರ್ 31ರ ಮಧ್ಯೆಗಿನ ಕಾಲಾವಧಿಯಲ್ಲಿ  ಯೋಜನೆ ಫಂಡ್‌ನಲ್ಲಿ ವಂಚನೆ ನಡೆಸಲಾಗಿದೆ. 57 ಮಂದಿ ಫಲಾನುಭವಿಗಳಿಗೆ ಫಂಡ್ ನೀಡಲೆಂದು ಟ್ರೆಷರಿಯಲ್ಲಿ ಸಲ್ಲಿಸಿದ ಬಿಲ್‌ನಲ್ಲಿ ೧೫ ಮಂದಿಗೆ ಲಭಿಸಬೇಕಾದ ಮೊತ್ತವನ್ನು ಸ್ವಂತ ಖಾತೆಗೆ ಬದಲಾಯಿಸಿಕೊಂಡಿದ್ದನೆನ್ನಲಾಗಿದೆ. ಈ ಮೂಲಕ 16,80,000 ರೂಪಾಯಿ ರಾಮದಾಸ್‌ನ ಹಲವು ಖಾತೆಗಳಿಗೆ ಬದಲಾಯಿಸಲಾಗಿದೆ. ಇದರಿಂದ ಸಂಶಯಗೊಂಡ ಕಾರ್ಯದರ್ಶಿ ಕ್ಲರ್ಕ್‌ನೊಂದಿಗೆ ವಿಚಾರಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಅನಂತರ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದರು.

ರಾಮದಾಸ್‌ರನ್ನು ಪನಿಶ್‌ಮೆಂಟ್ ಟ್ರಾನ್ಸ್‌ಫರ್ ಪ್ರಕಾರ ಮಂಜೇಶ್ವರಕ್ಕೆ ವರ್ಗಾವಣೆ ಮಾಡಲಾಗಿತ್ತು.

RELATED NEWS

You cannot copy contents of this page