ಫೇಸ್‌ಬುಕ್‌ನಲ್ಲಿ ಕಂಡ ಜಾಹೀರಾತು ಲಿಂಕ್ ಕ್ಲಿಕ್ ಯುವಕನ ಖಾತೆಯಿಂದ 2 ಲಕ್ಷ ರೂ. ನಷ್ಟ

ಕುಂಬಳೆ: ಫೇಸ್ ಬುಕ್‌ನಲ್ಲಿ ಕಂಡ ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿದ ಯುವಕನೋರ್ವ ತನ್ನ ಬ್ಯಾಂಕ್ ಖಾತೆಯಲ್ಲಿದ್ದ ಎರಡು ಲಕ್ಷ ರೂಪಾಯಿಗಳಷ್ಟು ಹಣ ಕಳೆದುಕೊಂಡ ಘಟನೆ ನಡೆದಿದೆ. ಬಂದ್ಯೋಡು ಅಡ್ಕ ನಿವಾಸಿ ಶಫೀಕ್ ಅಲಿ  ಆನ್‌ಲೈನ್  ವಂಚನೆಯಲ್ಲಿ ಸಿಲುಕಿದ್ದಾರೆ.  ಈ ಬಗ್ಗೆ  ಯುವಕ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರ. ಪಂಜಾಬ್ ನೇಶನಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಿರುವ ಅರ್ಜಿ ಆಹ್ವಾನಿಸಲಾಗಿದೆಯೆಂಬ ಮಾಹಿತಿ ಫೇಸ್‌ಬುಕ್‌ನಲ್ಲಿ ಕಂಡ ಶಫೀಕ್ ಅಲಿ  ಇದರ ಹೆಚ್ಚಿನ ಮಾಹಿತಿ ತಿಳಿಯಲೆಂದು ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿದ್ದರು.  ಅಷ್ಟರಲ್ಲಿ ಬ್ಯಾಂಕ್‌ನ ನಕಲಿ ಸೈಟ್ ತೆರೆದುಕೊಂಡಿದೆ. ಅಲ್ಲದೆ ತಕ್ಷಣವೇ ಇವರ ಬ್ಯಾಂಕ್ ಖಾತೆಯಿಂದ ಹಲವು ಬಾರಿಯಾಗಿ ಒಟ್ಟು 1,93,997 ರೂಪಾಯಿ   ನಷ್ಟಗೊಂಡಿದೆ. ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿದಾಗ ಇಷ್ಟು ಮೊತ್ತ ನಷ್ಟಗೊಂಡಿರುವುದಾಗಿ ತಿಳಿದುಬಂದಿದೆ. ಕೂಡಲೇ ಬ್ಯಾಂಕ್‌ನ್ನು ಸಂಪರ್ಕಿಸಿ ಬಳಿಕ ಕುಂಬಳೆ ಪೊಲೀಸರಿಗೆ ಯುವಕ ದೂರು ನೀಡಿದ್ದಾರೆ.

ಇದೇ ರೀತಿ ಹಲವು ಮಂದಿ  ಸೈಬರ್ ವಂಚನೆಗೆ ಬಲಿಯಾಗುತ್ತಿದ್ದಾರೆ. ನಕಲಿ ಲಿಂಕ್‌ಗಳಿಗೆ ಕ್ಲಿಕ್ ಮಾಡಕೂಡದೆಂದೂ, ವೈಯಕ್ತಿಕ ಮಾಹಿತಿಗಳನ್ನು ಹಾಗೂ ಒಟಿಪಿ ಹಸ್ತಾಂತರಿಸಕೂಡದೆಂದು ಪೊಲೀಸರು ಮುನ್ನೆಚ್ಚರಿಕೆ ನೀಡುತ್ತಿದ್ದಾರೆ. ಇತ್ತೀಚೆಗೆ ವಾಹನದ ದಂಡ ಮೊತ್ತ ಪಾವತಿಸಬೇಕೆಂಬ ಸಂದೇಶವನ್ನು ಕಂಡು ಅದನ್ನು ಕ್ಲಿಕ್ ಮಾಡಿದ ಚೆಂಗಳ ನಿವಾಸಿಯ ೧,೦೦,೦೦೦ ರೂಪಾಯಿ ನಷ್ಟಗೊಂಡಿತ್ತು.

RELATED NEWS

You cannot copy contents of this page