ಕುಂಬಳೆ: ಮನೆಯಲ್ಲಿ ನಿದ್ರಿಸುತ್ತಿದ್ದ ಮನೆಯೊಡೆಯನನ್ನು ಮುಂಜಾನೆ 1 ಗಂಟೆ ವೇಳೆ ಕರೆದು ಎಬ್ಬಿಸಿ ಅವರಿಗೆ ವ್ಯಕ್ತಿಯೋ ರ್ವ ಇರಿದು ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ. ಪಚ್ಚಂಬಳ ಸಫಾನಗರ ಎಂಬಲ್ಲಿನ ಮುಹಮ್ಮದ್ (63) ಎಂಬವರು ಇರಿತಕ್ಕೊಳಗಾದ ವ್ಯಕ್ತಿಯಾಗಿದ್ದಾರೆ. ಗಂಭೀರ ಗಾಯಗೊಂಡ ಇವರನ್ನು ಮಂಗ ಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸಫಾ ನಗರದ ಇರ್ಷಾದ್ ಯಾನೆ ಲುಟಾಪಿ ಎಂಬಾತ ಇರಿದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ಈತ ತಲೆಮರೆಸಿಕೊಂಡಿದ್ದಾನೆ.
ಇಂದು ಮುಂಜಾನೆ 1 ಗಂಟೆ ವೇಳೆ ಮನೆಯೊಳಗೆ ನಿದ್ರಿಸುತ್ತಿದ್ದ ಮುಹಮ್ಮದ್ ರನ್ನು ಇರ್ಷಾದ್ ಕರೆದು ಎಬ್ಬಿಸಿ ಅವರ ಮೇಲೆ ಇರಿದು ಗಾಯಗೊಳಿಸಿದ್ದಾನೆನ್ನಲಾಗಿದೆ. ಬೊಬ್ಬೆ ಕೇಳಿ ನಾಗರಿಕರು ತಕ್ಷಣ ಅಲ್ಲಿಗೆ ತಲುಪಿ ಮುಹಮ್ಮದ್ರನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ. ವಿಷಯ ತಿಳಿದು ಕುಂಬಳೆ ಸಿಐ ಆರ್.ಪಿ ಅನೂಪ್ಕೃಷ್ಣ, ಎಸ್ಐ ಎಸ್.ಅನೂಪ್ ಮೊದಲಾದವರು ಸ್ಥಳಕ್ಕೆ ತಲುಪಿದ್ದಾರೆ. ಇದೇ ವೇಳೆ ಘಟನೆ ಬಳಿಕ ಪರಾರಿಯಾದ ಆರೋಪಿಗಾಗಿ ಶೋಧ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇರ್ಷಾದ್ ಕಾಪಾ ಪ್ರಕರಣದ ಆರೋಪಿಯಾಗಿದ್ದಾನೆ. ಇತ್ತೀಚೆಗೆ ಈತ ಜೈಲಿನಿಂದ ಬಿಡುಗಡೆಗೊಂಡಿದ್ದನು. ಈತ ದಾಳಿ ನಡೆಸಲು ಸಾಧ್ಯತೆಯಿದೆಯೆಂದು ತಿಳಿಸಿ ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.






