ಚೂರಲ್ಮಲ ದುರಂತದಲ್ಲಿ ಅನಾಥೆಯಾದ ಶ್ರುತಿ ಗುರುವಾಯೂರಿನಲ್ಲಿ ದಾಂಪತ್ಯ ಜೀವನಕ್ಕೆ

ಕಲ್ಪಟ್ಟ: ವಯನಾಡು ಚೂರಲ್ಮಲದಲ್ಲಿ ಗುಡ್ಡೆ ಜರಿದು ಸಂಬಂಧಿಕರನ್ನು ಕಳೆದುಕೊಂಡು ಅನಾಥಳಾದ ಶ್ರುತಿ ಸುರೇಶ್ ವಿವಾಹಿತೆಯಾದರು. ವಯನಾಡು ಕಲೆಕ್ಟ್ರೇಟ್‌ನ ರೆವೆನ್ಯೂ ವಿಭಾಗ ನೌಕರನಾಗಿರುವ ಸಂದೀಪ್ ಶಂಕರ್ ಪತಿಯಾಗಿದ್ದಾರೆ. ಗುರುವಾಯೂರು  ಕ್ಷೇತ್ರದಲ್ಲಿ ಇಂದು ಬೆಳಿಗ್ಗೆ ವಿವಾಹ ನಡೆದಿದೆ. ಕಿಳಕ್ಕೇನಡೆಯ 1ನೇ ನಂಬ್ರ ಮಂಟಪದಲ್ಲಿ ಇವರಿಬ್ಬರು ವಿವಾಹವಾಗಿದ್ದಾರೆ. ಪೋಷಕರ ಸ್ಥಾನದಲ್ಲಿ ನಿಂತು ಎಲ್ಲಾ ಕಾರ್ಯಗಳಿಗೂ ಮೇಲ್ನೋಟ ವಹಿಸಿದ್ದು ಮಾಜಿ ಕಂದಾಯ ಸಚಿವ ಕೆ. ರಾಜನ್ ಆಗಿದ್ದಾರೆ.  ಜೊತೆಯಲ್ಲೇ ಕೆಲಸ ಮಾಡುವ ವ್ಯಕ್ತಿಯ ಕೈಗೆ ಈಕೆಯನ್ನು ನೀಡಿದಾಗ ಬಹಳ ಸಂತೋಷವಾಗುತ್ತದೆ ಎಂದು ರಾಜನ್ ನುಡಿದರು. ಎಲ್ಲಾ ತಿಳಿದು ನನ್ನ ಕೈ ಹಿಡಿದವಳಾಗಿದ್ದಾಳೆ ಈಕೆ. ಮುಂದೆ ನಮ್ಮ ಬದುಕು ಸಂತೋಷದಿಂದ ಮುಂದುವರಿಯಲಿ ಎಂದು ಪ್ರಾರ್ಥಿಸುತ್ತಿರುವುದಾಗಿ ಶ್ರುತಿ ನುಡಿದಿದ್ದಾರೆ.

ದುರಂತದಲ್ಲಿ ತಂದೆ ತಾಯಿ, ಸಹೋದರಿ ಸಹಿತ ಕುಟುಂಬದ 9 ಮಂದಿ ಶ್ರುತಿಯನ್ನು ಬಿಟ್ಟಗಲಿದ್ದರು. ಬಳಿಕ ವಿವಾಹ ನಿಗದಿಯಾಗಿದ್ದ ಜೆನ್ಸನ್ ಎಂಬ ಯುವಕ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಸಂಕಷ್ಟಗಳನ್ನೆಲ್ಲ ಮೆಟ್ಟಿನಿಂತು ಶ್ರುತಿ ಈಗ ಹೊಸ ಬದುಕಿಗೆ ಕಾಲಿರಿಸಿದ್ದಾರೆ.

You cannot copy contents of this page