ಎಂಡಿಎಂಎ ವಶ ಪ್ರಕರಣ : ಕಲ್ಲಿಕೋಟೆಯ ವೈದ್ಯ ಬಂಧನ

ಕಲ್ಪೆಟ್ಟ: ವಯನಾಡು ಲಕ್ಕಿಡಿ ಎಂಬಲ್ಲಿಂದ 8.520 ಗ್ರಾಂ ಎಂಡಿಎಂಎ ವಶಪಡಿಸಿ ಕೊಂಡ ಪ್ರಕರಣದಲ್ಲಿ ಖಾಸಗಿ ಆಸ್ಪತ್ರೆಯೊಂ ದರ ವೈದ್ಯನನ್ನು ಬಂಧಿಸಲಾಗಿದೆ. ಮಾದಕ ವಿರುದ್ಧ ಸ್ಕ್ವಾಡ್ ಹಾಗೂ ವೈತಿರಿ ಪೊಲೀಸರು ನಡೆಸಿದ ತನಿಖೆ ಯಲ್ಲಿ ಕಲ್ಲಿಕೋಟೆಯ ಖಾಸಗಿ ಸುಪರ್ ಸ್ಪೆಶಾಲಿಟಿ ಆಸ್ಪತ್ರೆಯೊಂ ದರ ಎಮರ್ಜೆನ್ಸಿ ಕ್ರಿಟಿಕಲ್ ಕೇರ್ ವಿಭಾಗದ ಮುಖ್ಯಸ್ಥನಾದ ಮಲಪ್ಪುರಂ ಮೊರಯೂರು ನಿವಾಸಿ  ಲವ್‌ಡೆಲ್ ವೀ ಟಿಲ್‌ನ  ಡಾ| ಕೆ.ಎನ್. ಮುಹ ಮ್ಮದ್ ಫಾಬಿನ್ ಸೆರೆಗೀಡಾಗಿ ದ್ದಾನೆ. ಈತ ನಿರಂತರ ಎಂಡಿಎಂಎ ಉಪಯೋಗಿಸು ತಿದ್ದ್ದ ನೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡು ನಿವಾಸಿಗಳಾದ ನೌಫಲ್, ಮುಹಮ್ಮದ್ ನಸೀಬ್ ಎಂಬಿವರನ್ನು ಅಕ್ಟೋಬರ್ 22ರಂದು ವೈತ್ತಿರಿ ಪೊಲೀಸರು ಬಂಧಿಸಿದ್ದರು. ಲಕ್ಕಿಡಿಯಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಇವರನ್ನು ಬಂಧಿಸಲಾಗಿತ್ತು.  ಡಾ| ಕೆ.ಎನ್.ಮುಹಮ್ಮದ್ ಫಾಬಿನ್ ಹಾಗೂ ನೌಫಲ್ ಮಧ್ಯೆ ನಡೆದ ಫೋನ್ ಕರೆಗಳು, ವಾಟ್ಸಪ್ ಸಂದೇಶಗಳು, ಹಣ ವ್ಯವಹಾರ ಮಾಹಿತಿಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅನಂತರ ನಡೆಸಿದ ತನಿಖೆಯಲ್ಲಿ ಪ್ರಕರಣದ ಮೂರನೇ ಆರೋಪಿಯಾದ ಡಾ| ಕೆ.ಎನ್. ಮುಹಮ್ಮದ್ ಫಾಬಿನ್ ಕುರಿತು ಸೂಚನೆ ಲಭಿಸಿದೆ. ಇದರಂತೆ ಕಲ್ಲಿಕೋಟೆ ಮಣಾಶ್ಶೇರಿಯಲ್ಲಿರುವ ಬಾಡಿಗೆ ಮನೆ ಸಮೀಪದಿಂದ ಈತನನ್ನು ಕಸ್ಟಡಿಗೆ ತೆಗೆಯಲಾಗಿದೆ. ಬಳಿಕ ಬಂಧನ ದಾಖಲಿಸಿ ಕಲ್ಪೆಟ್ಟ ಜ್ಯುಡೀಶಿಯಲ್ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಈವೇಳೆ ಆರೋಪಿಗೆ ರಿಮಾಂಡ್ ವಿಧಿಸಲಾಗಿದೆ.

You cannot copy contents of this page