ಬದಿಯಡ್ಕ: ಮನೆಯಿಂದ ಹೊರಗೆ ತೆರಳಿದ ಯುವತಿ ಮರಳಿ ಬಾರದೆ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ತಂದೆ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ. ಮುಂಡಿತ್ತಡ್ಕ ಬಾಪಾಲಿಪೊನದ ಎ. ಯೂಸಫ್ರ ಪುತ್ರಿ ಹನ್ನತ್ ಬೀವಿ (30) ನಾಪತ್ತೆಯಾಗಿರುವುದಾಗಿ ತಿಳಿಸಲಾಗಿದೆ. ಗುರುವಾರ ರಾತ್ರಿ 9.30 ಗಂಟೆ ಬಳಿಕ ಪುತ್ರಿ ಮನೆಯಿಂದ ನಾಪತ್ತೆಯಾಗಿರುವು ದಾಗಿ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.






