ನಗರದಲ್ಲಿ ಬಿಜೆಪಿಯಿಂದ ಪ್ರಜಾಪ್ರಭುತ್ವ ಸಂರಕ್ಷಣಾ ಪಾದಯಾತ್ರೆ, ಸಾರ್ವಜನಿಕ ಸಭೆ ನಾಳೆ

ಕಾಸರಗೋಡು: ‘ಅರಾಜಕತೆ ಯನ್ನು ತಡೆಗಟ್ಟಿರಿ, ಪ್ರಜಾಪ್ರಭುತ್ವವನ್ನು ರಕ್ಷಿಸಿರಿ’ ಎಂಬ ಘೋಷಣೆಯೊಂದಿಗೆ ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಆಯೋ ಜಿಸುತ್ತಿರುವ ಅಭಿಯಾನದಂಗವಾಗಿ ನಾಳೆ ಅಪರಾಹ್ನ 3 ಗಂಟೆಗೆ ಕಾಸರಗೋಡು ನಗರದಲ್ಲಿ ಪ್ರಜಾ ಪ್ರಭುತ್ವ ಸಂರಕ್ಷಣಾ ಪಾದಯಾತ್ರೆ ಮತ್ತು ಸಾರ್ವಜನಿಕ ಸಭೆ ಆಯೋಜಿಸಲಾಗು ವುದು ಎಂದು ಬಿಜೆಪಿ ನಾಯಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊ. ನಾಗರಾಜ್ ಎಂ.ಪಿ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಂ. ವೆಂಕಟೇಶನ್, ಚಾತ್ತನ್ನೂರು ಶಾಸಕ ಬಿ.ಬಿ. ಗೋಪಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವ. ಎಸ್. ಸುರೇಶ್ ಸೇರಿದಂತೆ ಹಿರಿಯ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಭಾಗವಹಿಸುವರು.
ಭಾರತದ ವಿರೋಧ ಪಕ್ಷ ನಾಯ ಕರು ಹೊರಿಸುವ ಆರೋಪಗಳೆಲ್ಲವೂ ಆಧಾರ ರಹಿತವೆಂಬುದನ್ನು ದೇಶದ ಜನರು ಅರಿತುಕೊಳ್ಳಲು ಆರಂಭಿಸಿ ದ್ದಾರೆ. ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನೆಯ ಚಿತ್ರಗಳು ಮತ್ತು ವೀಡಿಯೊಗಳೆಂದು ಪ್ರಚಾರ ಮಾಡಲಾಗಿರುವ ಹಲವು ದೃಶ್ಯಗಳನ್ನು ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಎನ್‌ಡಿಎಯನ್ನು ಅಧಿಕಾರದಿಂದ ಕೆಳಗಿಳಿಸುವುದು ಅತ್ಯಂತ ಕಷ್ಟ ಎಂಬ ವಾಸ್ತವ ಕಾಂಗ್ರೆಸ್ ನಾಯಕರ ಹೇಳಿಕೆಗಳಿಂದಲೇ ಸ್ಪಷ್ಟವಾಗುತ್ತದೆ. ೨೦೧೪ಕ್ಕೂ ಮುನ್ನ ಇದ್ದ ಪರಿಸ್ಥಿತಿಗೆ ದೇಶವನ್ನು ಮರಳಿ ಕೊಂಡೊಯ್ಯ ಬೇಕು ಎಂಬ ಕಾಂಗ್ರೆಸ್‌ನ ಮಾಜಿ ರಾಷ್ಟ್ರೀಯ ಅಧ್ಯಕ್ಷರ ಹೇಳಿಕೆಯ ಉದ್ದೇಶವೇನು ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರದ ೧೨ ವರ್ಷಗಳ ಆಡಳಿತದಲ್ಲಿ ದೇಶವು ಹಿಂದೆAದೂ ಕಾಣದ ಅಭಿವೃದ್ಧಿಯ ಪ್ರಗತಿಯನ್ನು ಸಾಧಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯ ವಾತಾವರಣ ಮರುಸ್ಥಾಪನೆಯಾಗಿದೆ. ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾಮಾನ್ಯ ಜನರೂ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸುತ್ತಿ ದ್ದಾರೆ ಎಂದು ಅವರು ನುಡಿದರು.
ಮೋದಿ ಸರಕಾರದ ಅಭಿವೃದ್ಧಿ ಕಾರ್ಯಗಳು ಹಾಗೂ ದೇಶದ ಪ್ರಗತಿಗೆ ವಿರುದ್ಧವಾಗಿ ಇಂತಹ ಪ್ರತಿಭಟನೆಗಳು ನಡೆಯುತ್ತಿವೆ ಎಂಬುದನ್ನು ಜನರು ಅರಿತುಕೊಳ್ಳಲು ಆರಂಭಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶದ ಮೂಲಕ ಅಧಿಕಾರಕ್ಕೆ ಬಂದ ಸರಕಾರವನ್ನು ಬೀದಿ ಪ್ರತಿಭಟನೆಗಳಲ್ಲಿ ಜನಸಮೂಹವನ್ನು ಬಳಸಿಕೊಂಡು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ನಡೆಯುತ್ತಿದೆ. ‘ಅಫ್ಜಲ್ ಗುರು ಜಿಂದಾಬಾದ್’, ‘ರಿಜೀಮ್ ಚೇಂಜ್’ ಮುಂತಾದ ಘೋಷಣೆಗಳು ದೇಶದ ಏಕತೆ ಮತ್ತು ಅಖಂಡತೆಗೆ ವಿರುದ್ಧವಾದ ಚಿಂತನೆಗಳನ್ನು ಪ್ರತಿಬಿಂಬಿಸುತ್ತವೆ. ಬಾಂಗ್ಲಾದೇಶದಲ್ಲಿ ನಡೆದ ರೀತಿಯ ಆಡಳಿತ ಬದಲಾವಣೆ ಭಾರತದಲ್ಲೂ ನಡೆಯಲಿದೆ ಎಂದು ಕೆಲವರು ನಿರೀಕ್ಷಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕಳೆದ ಎರಡು ವರ್ಷಗಳಲ್ಲಿ ವಿವಿಧ ರಾಜ್ಯಗಳಲ್ಲಿ ನಡೆದ ಎಲ್ಲಾ ಚುನಾವಣೆಗಳಲ್ಲೂ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಆರೋಪಿಸುತ್ತಿದ್ದಾರೆ. ಹಾಗಾದರೆ ಕೇರಳದಲ್ಲಿ ಯುಡಿಎಫ್ ಪಡೆದ ಗೆಲುವನ್ನೂ ಪ್ರಶ್ನಿಸಬೇಕಾಗುತ್ತದೆ. ಈ ವಾದವನ್ನು ಒಪ್ಪಿಕೊಂಡರೆ ವಿ.ಡಿ. ಸತೀಶನ್ ಸೇರಿದಂತೆ ಎಲ್ಲರೂ ರಾಜೀನಾಮೆ ನೀಡಬೇಕಾಗುತ್ತದೆ.
ಹಿಂದಿನ ಕಾಲದಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಮಾಡಿದ ಹಲವು ಆರೋಪಗಳನ್ನು ಜನರು ತಿರಸ್ಕರಿಸಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಹಲವು ಕಾಲೇಜು ಚುನಾವಣೆಗಳಲ್ಲಿಯೂ ರಾಷ್ಟ್ರೀಯ ವಿಚಾರಧಾರೆಗಳನ್ನು ಪ್ರತಿಪಾದಿಸುವ ವಿದ್ಯಾರ್ಥಿ ಸಂಘಟನೆಗಳು ಗೆಲುವು ಸಾಧಿಸುತ್ತಿವೆ. ಬಿಜೆಪಿ ಗಳಿಸುತ್ತಿರುವ ಜನವಿಶ್ವಾಸವನ್ನು ಮೀರಿಸಲು ಕಾಂಗ್ರೆಸ್ ಸಕಾರಾತ್ಮಕ ರಾಜಕೀಯ ಚಟುವಟಿಕೆಗಳನ್ನು ನಡೆಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಕೆ. ಸಜೀವನ್ ಹೇಳಿದರು.

RELATED NEWS

You cannot copy contents of this page