ಲೈಸನ್ಸ್ ರಹಿತ ಚೈನೀಸ್ ನಿರ್ಮಿತ ಪಟಾಕಿ ಮಾರಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಮಂಜೇಶ್ವರ: ಲೈಸನ್ಸ್ ಆಗಲೀ ಸರಿಯಾದ ರೀತಿಯ ಕಾನೂನು ಪರ ದಾಖಲು ಪತ್ರಗಳಾಗಲೀ ಹೊಂದದೆ ಚೈನೀಸ್ ಪಟಾಕಿ ಮಾರಾಟ ಮಾಡಿದ ಆರೋಪದಂತೆ ಮಂಜೇಶ್ವರ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವರ್ಕಾಡಿ ಮಜೀರ್ಪಳ್ಳದ ಜಂಕ್ಷನ್ ಬಳಿ ಮಂಜೇಶ್ವರ ಪೊಲೀಸರು ಈ ತಿಂಗಳ 8ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಲೈಸನ್ಸ್ ಹೊಂದದೆ ಸಾರ್ವಜನಿಕ ಸ್ಥಳದಲ್ಲಿ ಚೈನೀಸ್ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಂತೆ ಮೀಂಜಾ ಮೂಡಂಬೈಲ್ ಬಜೆ ಹೌಸ್‌ನ ಪ್ರವೀಣ್ ಕುಮಾರ್ ಜಿ. (33) ಎಂಬಾತನನ್ನು ಪೊಲೀಸರು ಸೆರೆ ಹಿಡಿದು ಅಲ್ಲಿಂದ ಮಾಲುಗಳು ಮತ್ತು ೩೫೨೦ ರೂ. ನಗದು ವಶಪಡಿಸಿಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಇದೇ ರೀತಿ ಹೊಸಂಗಡಿಯಲ್ಲಿ ಮಂಜೇಶ್ವರ ಪೊಲೀಸರು ನಿನ್ನೆ ಸಂಜೆ ನಡೆಸಿದ ಇನ್ನೊಂದು ಕಾರ್ಯಾ ಚರಣೆಯಲ್ಲಿ ಲೈಸನ್ಸ್ ಹೊಂದದೆ ಸಾರ್ವಜನಿಕ ಸ್ಥಳದಲ್ಲಿ ಐದು ರೀತಿಯ ಚೀನಾ ನಿರ್ಮಿತ ಪಟಾಕಿಗಳನ್ನು ಮಾರಾಟ ಮಾಡಿದ ಆರೋಪದಂತೆ ಬಂಗ್ರಮಂಜೇಶ್ವರ ಮೀತ ಕನಿಲ ಹೌಸ್‌ನ ಭರತ್ ಬಿ.ಎಂ. (37) ಎಂಬಾತನನ್ನು ಮಾಲು ಸಹಿತ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಂತರ ಈ ಎರಡು ಪ್ರಕರಣಗಳ ಆರೋಪಿಗಳಿಗೆ ನೋಟೀಸ್ ನೀಡಿದ ಅವರಿಬ್ಬರನ್ನು ಪೊಲೀಸರು ಜಾಮೀನಿನಲ್ಲಿ ಬಿಡುಗಡೆಗೊಳಿಸಿದರು.

RELATED NEWS

You cannot copy contents of this page