ಕಾಸರಗೋಡು: ಆಟೋ ಟ್ಯಾಕ್ಸಿ ಪ್ರಯಾಣ ದರ ಹೆಚ್ಚಿಸಬೇಕೆಂದು ಒತ್ತಾಯಿಸಿ ರಾಜ್ಯದಲ್ಲಿ ಇಂದು ಮಧ್ಯರಾತ್ರಿಯಿಂದ 24 ಗಂಟೆಗಳ ಸೂಚನಾ ಮುಷ್ಕರ ನಡೆಯಲಿದೆ. ಆಟೋ ಟ್ಯಾಕ್ಸಿ ಸಂಯುಕ್ತ ಟ್ರೇಡ್ ಯೂನಿಯನ್ ಹಾಗೂ ಬಿಎಂಎಸ್ ನೇತೃತ್ವದಲ್ಲಿ ಮುಷ್ಕರ ನಡೆಯಲಿರುವುದು. ಆಟೋ ಟ್ಯಾಕ್ಸಿ ಕನಿಷ್ಠ ಪ್ರಯಾಣ ದರವನ್ನು ನವೀಕರಿಸಬೇಕೆಂಬುದಾಗಿದೆ ಸಂಘಟನೆಗಳ ಪ್ರಧಾನ ಬೇಡಿಕೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ 16 ಬಾರಿ ಇಂಧನ ಬೆಲೆ ಹೆಚ್ಚಿಸಲಾಗಿದೆ. ಇಂಧನ ಬೆಲೆ, ಇನ್ಶೂರೆನ್ಸ್ ಪ್ರೀಮಿಯಂನ ಮೊತ್ತದಲ್ಲಿ ಹೆಚ್ಚಳ ವುಂಟಾಗಿದ್ದರೂ ಪ್ರಯಾಣದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದೀಗಿನ ಆದಾಯದಿಂದ ಕುಟುಂ ಬವನ್ನು ಸಲಹುವುದು ಕಷ್ಟಕರವಾಗಿ ದೆಯೆಂದು ಆಟೋ ಟ್ಯಾಕ್ಸಿ ನೌಕರರು ತಿಳಿಸುತ್ತಿದ್ದಾರೆ. ತಮಿಳುನಾಡು ಸಹಿತ ವಿವಿಧ ರಾಜ್ಯಗಳಲ್ಲಿ ಆಟೋ ಟ್ಯಾಕ್ಸಿ ಕನಿಷ್ಠ ದರ ೫೦ ರೂಪಾಯಿಯಾಗಿದೆ. ಆದ್ದರಿಂದ ಕೇರಳದಲ್ಲೂ ಇದೇ ರೀತಿ ದರ ಹೆಚ್ಚಿಸಬೇಕೆಂಬುದಾಗಿ ನೌಕರರ ಸಂಘಟನೆಗಳು ಒತ್ತಾಯಿಸುತ್ತಿವೆ. ಇದೇ ವೇಳೆ ಮುಷ್ಕರದಲ್ಲಿ ಐಎನ್ ಟಿಯುಸಿ, ಎಸ್ಟಿಯು ಮೊದಲಾದ ಸಂಘಟನೆಗಳು ಭಾಗವಹಿಸುವು ದಿಲ್ಲವೆಂದು ತಿಳಿಸಿವೆ. ಇದೇ ಸಂದರ್ಭದಲ್ಲಿ ಸಂಘಟನೆಗಳೊಂದಿಗೆ ಇಂದು ಮಧ್ಯಾಹ್ನ ತಿರುವನಂತಪುರದಲ್ಲಿ ಸಾರಿಗೆ ಸಚಿವ ಸಿ.ಪಿ. ಜೋನ್ ಚರ್ಚೆ ನಡೆಸಲಿದ್ದಾರೆಂದು ತಿಳಿದುಬಂದಿದೆ.






