ಕುಂಬಳೆ: ಉಪ್ಪಳ ಬಸ್ ನಿಲ್ದಾಣದಲ್ಲಿ ಬೇಕರಿ ಮಾಲಕನಾದ ಅಬ್ದುಲ್ಲ (58) ಎಂಬವರು ಹಲ್ಲೆಯಿಂದ ಗಾಯಗೊಂಡು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ದ್ದಾರೆ. ಕಾಸರಗೋಡು-ತಲಪ್ಪಾಡಿ ರೂಟ್ನಲ್ಲಿ ಸಂಚರಿಸುವ ಖಾಸಗಿ ಬಸ್ಸೊಂದರ ಚಾಲಕ ಇವರಿಗೆ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಗಾಯಗೊಂಡ ಅಬ್ದುಲ್ಲ ಈ ರೀತಿ ತಿಳಿಸಿದ್ದಾರೆ – ನಿನ್ನೆ ಸಂಜೆ ಸ್ನೇಹಿತನೋರ್ವ ತನಗೆ ಕರೆಮಾಡಿ ಬಸ್ನಲ್ಲಿ ಪಾರ್ಸೆ ಲೊಂದು ಬರಲಿದ್ದು ಅದನ್ನು ತೆಗೆ ಯುವಂತೆ ತಿಳಿಸಿದ್ದನು.
ಇದರಂತೆ 5 ಗಂಟೆಗೆ ಬಸ್ ಉಪ್ಪಳ ನಿಲ್ದಾಣಕ್ಕೆ ತಲುಪಿದಾಗ ಚಾಲಕನ ಕೈಯಿಂದ ಪಾರ್ಸೆಲ್ ಪಡೆಯಲು ಹೋಗಿದ್ದೆನು. ಪಾರ್ಸೆಲ್ ನೀಡಿದ ಬಳಿಕ ಚಾಲಕ ೩೦ ರೂ.ನೀಡುವಂತೆ ತಿಳಿಸಿದ್ದಾನೆ. ಈ ವೇಳೆ ತನ್ನ ಕೈಯಲ್ಲಿ ಹಣವಿರಲಿಲ್ಲ. ಅಂಗಡಿಗೆ ತೆರಳಿ ಹಣ ಸಹಿತ ಬಸ್ನ ಬಳಿಗೆ ಬಂದಾಗ ಚಾಲಕ ನೀರು ಕುಡಿಯುತ್ತಿದ್ದನು. ಈ ವೇಳೆ ಹಣ ಯಾಕೆಂದು ಪ್ರಶ್ನಿಸಿದಾಗ ನೀರಿನ ಬಾಟ್ಲಿಯಿಂದ ಚಾಲಕ ತನ್ನ ತಲೆಗೆ ಆತ ಹೊಡೆದಿದ್ದಾನೆ. ಬಳಿಕ ತಾನು ಅಂಗಡಿಗೆ ಹೋದಾಗ ಅಲ್ಲಿಗೂ ತಲುಪಿ ಚಾಲಕ ಹಲ್ಲೆಗೈದಿದ್ದಾನೆ ಎಂದು ಅಬ್ದುಲ್ಲ ದೂರಿದ್ದಾರೆ. ಈ ಘಟನೆಗೆ ಸಂಬಂಧಿಸಿ ಬಸ್ಸನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.






