ಹೊಸದುರ್ಗ: ಹುಚ್ಚುನಾಯಿ ರೋಗ ತಗಲಿರುವುದಾಗಿ ಶಂಕಿಸುವ ವ್ಯಕ್ತಿ ಮೃತಪಟ್ಟರು. ಪುಲ್ಲೂರು ಉದಯನಗರ ನಿವಾಸಿ ಅಶೋಕನ್ (55) ಮೃತಪಟ್ಟವರು. ವಾಹನಗಳಿಗೆ ಪೈಂಟ್ ಕೊಡುವ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಆದಿತ್ಯವಾರ ಅಶೋಕನ್‌ರಿಗೆ ರೋಗಲಕ್ಷಣ ಕಂಡುಬಂದಿತ್ತು. ಕಾಞಂಗಾಡ್ ಆಸ್ಪತ್ರೆಗೆ ತಲುಪಿಸಿ ಪ್ರಾಥಮಿಕ ಶುಶ್ರೂಷೆ ನೀಡಲಾಯಿತು. ಈ ವೇಳೆ ಹುಚ್ಚುನಾಯಿ ರೋಗ ಲಕ್ಷಣದ ಶಂಕೆ ಡಾಕ್ಟರ್‌ಗೆ ಮೂಡಿಬಂದಿತ್ತು.
ಮೂರು ತಿಂಗಳ ಹಿಂದೆ ಚಿತ್ತಾರಿ ಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಶೋಕನ್‌ರಿಗೆ ಬೀದಿ ನಾಯಿ ಪರಚಿತ್ತೆಂಬ ಮಾಹಿತಿ ಇದೆ. ಪ್ರತಿರೋಧ ಚುಚ್ಚುಮದ್ದು ತೆಗೆದಿರಲಿಲ್ಲ ಎನ್ನಲಾಗಿದೆ. ಅಶೋಕನ್‌ರನ್ನು ಸೋಮವಾರ ಕಾಞಂಗಾಡ್ ಜಿಲ್ಲಾಸ ತ್ರೆಯಲ್ಲೂ, ಬಳಿಕ ಪರಿಯಾರಂ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೂ ದಾಖಲಿಸಿ ಚಿಕಿತ್ಸೆ ನೀಡಲಾ ಯಿತು. ಆದರೂ ರಾತ್ರಿ ವೇಳೆ ನಿಧನ ಸಂಭವಿಸಿದೆ. ಮೃತದೇಹವನ್ನು ಈಗ ಪರಿಯಾರಂ ಶವಾಗಾರದಲ್ಲಿರಿಸ ಲಾಗಿದೆ. ರೋಗವನ್ನು ಖಚಿತಪಡಿಸುವು ದಕ್ಕಾಗಿ ಸ್ಯಾಂಪಲ್ ವೈರೋಲಜಿ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ. ಮಾಹಿತಿ ತಿಳಿದು ಆರೋಗ್ಯ ಇಲಾಖೆ ಅಧಿಕಾರಿಗಳು ನಿನ್ನೆ ಉದಯನಗರದ ಅಶೋಕನ್‌ರ ಮನೆಗೆ ಭೇಟಿ ನೀಡಿದ್ದರು. ಮೃತರು ಪತ್ನಿ ಬಿಂದು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






