ಕಾಸರಗೋಡು: ರಾಜ್ಯ ಕ್ರೈಮ್ಬ್ರಾಂಚ್ ತನಿಖೆ ನಡೆಸುವ ಅಬೂಬಕ್ಕರ್ ಸಿದ್ದಿಕ್ ಕೊಲೆ ಪ್ರಕರಣದ ತಲೆಮರೆಸಿಕೊಂಡಿರುವ ಆರೋಪಿಯ ಜೊತೆ ಕೊಲ್ಲಿಯಲ್ಲಿ ಜ್ಯುವೆಲ್ಲರಿ ಉದ್ಘಾ ಟನೆ ಕಾರ್ಯ ಕ್ರಮದಲ್ಲಿ ಯುಡಿಎಫ್ ಮುಖಂಡರು ಭಾಗವಹಿಸಿರುವುದು ವಿವಾದವಾಗಿದೆ. ಆರೋಪಿಯ ಜೊತೆ ಯುಡಿಎಫ್ ಮುಖಂಡರು ಸೌಹಾರ್ದ ದಿಂದಿರುವ ಚಿತ್ರಗಳು ಬಹಿರಂಗ ಗೊಂಡಿರುವುದರೊಂದಿಗೆ ರಾಜಕೀಯ ರಂಗದಲ್ಲಿ ವಿವಾದಕ್ಕೆ ಕಾರಣವಾಗಿದೆ. ಮಂಜೇಶ್ವರದ ಅಬೂಬಕ್ಕರ್ ಸಿದ್ದಿಕ್ ಕೊಲೆ ಕೃತ್ಯ ಪ್ರಕರಣದ 13ನೇ ಆರೋಪಿ ಪೈವಳಿಕೆ ಅಂಬಿಕಾನ ನಿವಾಸಿ ಅಹಮ್ಮದ್ ರಯೀಸ್ ಜೊತೆ ಶಾಸಕರಾದ ಎಕೆಎಂ ಅಶ್ರಫ್, ಸಂದೀಪ್ ವಾರ್ಯರ್, ಮುಸ್ಲಿಂ ಲೀಗ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಎನ್.ಎ. ನೆಲ್ಲಿಕುನ್ನು ಎಂಬಿವರು ಇರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗುತ್ತಿದೆ.
ಕೊಲ್ಲಿಯಲ್ಲಿ ನಡೆದ ಜ್ಯುವೆಲ್ಲರಿ ಅಂಗಡಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಹಮ್ಮದ್ ರಯೀಸ್ ಹಾಗೂ ಯುಡಿಎಫ್ ಮುಖಂಡರು ಭಾಗವಹಿಸಿರುವುದು.
2022 ಜೂನ್ 26ರಂದು ಮುಗು ರಸ್ತೆಯ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಕೊಲೆ ನಡೆದಿತ್ತು. ಕೊಲ್ಲಿಯಿಂದ ಬರಹೇಳಿ ಕೊಲೆಗೈಯ್ಯಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ಅಬೂಬಕ್ಕರ್ ಸಿದ್ದಿಕ್ನನ್ನು ಅಪಹರಿಸಿ ಕೊಂಡುಹೋಗಿ ಬಳಿಕ ಪೈವಳಿಕೆ ನೂಜಿಯ ಮನೆಯಲ್ಲಿ ಹಾಗೂ ಮನೆ ಸಮೀಪದ ಜನವಾಸವಿಲ್ಲದ ಹಿತ್ತಿಲಿಗೆ ಕೊಂಡೊಯ್ದು ತಲೆಕೆಳಗೆ ಮಾಡಿ ಕಟ್ಟಿ ತೂಗುಹಾಕಿ ಮಾರಕಾಯುಧಗಳನ್ನು ಉಪಯೋಗಿಸಿ ಕ್ರೂರವಾಗಿ ಆಕ್ರಮಿಸಿ ರುವುದಾಗಿ ಕೇಸು ದಾಖಲಾಗಿತ್ತು. ಕೊಲೆಯ ಬಳಿಕ ಮೃತದೇಹವನ್ನು ಬಂದ್ಯೋಡು ಖಾಸಗಿ ಆಸ್ಪತ್ರೆಯಲ್ಲಿ ಉಪೇಕ್ಷಿಸಿ ಆರೋಪಿಗಳು ಪರಾರಿಯಾಗಿದ್ದರು. ಕೊಲ್ಲಿಗೆ ವಿದೇಶ ಕರೆನ್ಸಿ ಸಾಗಿಸಿರುವುದಕ್ಕೆ ಸಂಬಂಧಿಸಿದ ವಿಚಾರದಲ್ಲಿ ಉಪ್ಪಳ ನಿವಾಸಿಗೆ ಬೇಕಾಗಿ ಕೊಟೇಶನ್ ವಹಿಸಿಕೊಂಡು ಕೊಲೆ ನಡೆಸಲಾಗಿತ್ತು. ಮಂಜೇಶ್ವರ ಪೊಲೀಸರು ತನಿಖೆ ಆರಂಭಿಸಿ ಬಳಿಕ ರಾಜ್ಯ ಕ್ರೈಮ್ ಬ್ರಾಂಚ್ಗೆ ನೀಡಿದ್ದರು. ಕ್ರೈಮ್ ಬ್ರಾಂಚ್ನ ತನಿಖೆಯಲ್ಲಿ ಅಬ್ದುಲ್ ರಯೀಸ್ನನ್ನು ಆರೋಪಿಯಾಗಿ ಸೇರಿಸಲಾಗಿತ್ತು. ಇದರಿಂದ ಆರೋಪಿ ವಿದೇಶಕ್ಕೆ ಪರಾರಿ ಯಾಗಿದ್ದನು. ತಲೆಮರೆಸಿಕೊಂಡಿರುವ ಈ ಆರೋಪಿ ನಾಲ್ಕು ವರ್ಷದ ಬಳಿಕ ಐಕ್ಯರಂಗದ ಜನಪ್ರತಿನಿಧಿಗಳ ಜೊತೆ, ಮುಖಂಡರ ಜೊತೆ ನಿಂತಿರುವ ಚಿತ್ರ ತನಿಖಾ ತಂಡಕ್ಕೆ ಲಭಿಸಿದೆ. ಈ ಪ್ರಕರಣದಲ್ಲಿ ನಿರ್ಣಾಯಕವಾಗಬಹುದಾದ ಈ ಘಟನೆಯ ಬಗ್ಗೆ ಇಂಟರ್ಪೋಲ್ನ ಸಹಾಯದೊಂದಿಗೆ ಕೊಲ್ಲಿ ಕೇಂದ್ರೀಕರಿಸಿ ಕ್ರೈಮ್ಬ್ರಾಂಚ್ ತನಿಖೆ ನಡೆಸಲಿದೆ ಎಂದು ಮಾಹಿತಿ ಲಭಿಸಿದೆ.
ವಿದೇಶದಲ್ಲಿ ತಲೆಮರೆಸಿಕೊಂಡ ಆರೋಪಿ ಜೊತೆ ಶಾಸಕರಿಗೆ ಸಂಬಂಧವೇನು?- ಬಿಜೆಪಿ ಪ್ರಶ್ನೆ
ಪೈವಳಿಕೆ: ಕೊಲೆ ಪ್ರಕರಣದ ಆರೋಪಿ, ವಿದೇಶಿ ಕರೆನ್ಸಿ ಕಳ್ಳ ಸಾಗಾಟದ ರೂವಾರಿ, ಗಲ್ಫ್ ರಾಷ್ಟ್ರದಲ್ಲಿ ತಲೆ ಮೆರೆಸಿಕೊಂಡಿರುವ ಆರೋಪಿ ಜೊತೆ ಮಂಜೇಶ್ವರ ಶಾಸಕರಿಗೆ ವಿದೇಶದಲ್ಲಿ ಏನು ಸಂಬAಧ ಎಂಬುದನ್ನು ಶಾಸಕರು ಸ್ಪಷ್ಟ ಪಡಿಸಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಆದರ್ಶ ಬಿ.ಎಂ ಅಗ್ರಹಿಸಿದ್ದಾರೆ. ಮಂಜೇಶ್ವರ ಶಾಸಕರಿಗೆ ಈ ಕೊಲೆ ಪ್ರಕರಣ ತಿಳಿಯದ ವಿಚಾರ ಅಲ್ಲ. ಪೈವಳಿಕೆಯಲ್ಲಿ ಕೊಲೆ ಆರೋಪಿಗಳ ಬಂಧನಕ್ಕೆ ನಡೆದ ಪ್ರತಿಭಟನೆಗಳ ಒತ್ತಡದಿಂದ ಶಾಸಕರು ಆರೋಪಿಗಳನ್ನು ಬಂದಿsಸಬೇಕೆAದು ವಿಧಾನಸಭೆಯಲ್ಲಿ ವಿಚಾರ ಪ್ರಸ್ತಾವನೆ ಮಾಡಿದ್ದಾರೆ. ಇದು ಶಾಸಕರ ನಾಟಕವೇ ಎಂದು ಬಿಜೆಪಿ ಪ್ರಶ್ನಿಸಿದೆ. ಪ್ರತಿ ತಿಂಗಳು ವಿದೇಶ ಯಾತ್ರೆ ಮಾಡುವ ಶಾಸಕರ ನಡೆ ನಿಗೂಢವಾಗಿದೆ. ಇದರ ಬಗ್ಗೆ ಸಮಗ್ರ ತನಿಖೆ ಕೂಡ ಅಗತ್ಯ ಎಂದು ಬಿಜೆಪಿ ಹೇಳಿದೆ.
ಮಂಜೇಶ್ವರ ಶಾಸಕರಿಗೆ ಮಂಜೇಶ್ವರದ ಅಭಿವೃದ್ಧಿಯ ಬಗ್ಗೆ ರೂಪುರೇಷೆ ತಯಾರಿಸಲು ಸಮಯ ಇಲ್ಲ, ಆದರೆ ವಿದೇಶದಲ್ಲಿ ಆರೋಪಿಗಳನ್ನು ಭೇಟಿ ಆಗಲು ಸಮಯ ಇದೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಸೂಕ್ತ ತನಿಖೆಗೆ ಬಿಜೆಪಿ ಅಗ್ರಹಿಸಿದೆ.






