ಕನಿಲ ಶ್ರೀ ಭಗವತೀ ಕ್ಷೇತ್ರದ ಗುರಿಕ್ಕಾರ ನಿಧನ

ಹೊಸಂಗಡಿ: ಮಂಜೇಶ್ವರ ಬಡಾಜೆ ಚೌಕಿ ನಿವಾಸಿ ಆನಂದ ಗುರಿಕ್ಕಾರ (70) ನಿಧನ ಹೊಂದಿ ದರು. ಭಾನುವಾರ ರಾತ್ರಿ ಮನೆಯಲ್ಲಿ ಕುಸಿದು ಬಿದ್ದಿದ್ದು, ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದರು. ಆದರೆ ಬುಧವಾರ ಬೆಳಿಗ್ಗೆ ನಿಧನ ಹೊಂದಿದರು. ಇವರು ಕನಿಲ ಶ್ರೀ ಭಗವತೀ ಕ್ಷೇತ್ರದದಲ್ಲಿ 23 ವರ್ಷಗಳಿಂದ ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಹೊಸಂಗಡಿ ರೈಲ್ವೇ ಗೇಟ್ ಸಮೀ ಪದಲ್ಲಿ ಗೂಡಂಗಡಿ ವ್ಯಾಪಾರಿ ಯಾಗಿದ್ದು, ‘ಕಾರವಲ್’ ಪತ್ರಿಕೆಯ ಏಜಂಟ್ ಕೂಡಾ ಆಗಿದ್ದರು.
ಮೃತರು ಪತ್ನಿ ವಸಂತಿ, ಮಕ್ಕಳಾದ ಚೇತನ್, ಸಚಿನ್, ಶರಣ್, ಸೊಸೆ ರೂಪಿಕ, ಸಹೋ ದರಿ ವಿಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page