ಮಾದಕ ವಸ್ತು ಸಹಿತ ಮೂವರ ಸೆರೆ

ಹೊಸದುರ್ಗ: ಮಾರಕ ಮಾದಕವಸ್ತುವಾದ ಎಂ.ಡಿ.ಎಂ.ಎ ಸಹಿತ ಮೂರು ಮಂದಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಕಣ್ಣಾಡಿಪರಂಬ ನಾರಾತ್ ನಿವಾಸಿ ಅನ್ಸಾರಿ ವಿ.ವಿ. (೩೨), ವಳಪಟ್ಟಣ ಪಾಲೋಟ್ ವಯಲ್ ನಾಸಿಲಾತ್ ಹೌಸ್‌ನ ರಿಸ್ವಾನ್ ಪಿ.ಎ.(೩೪), ಅಳಿಕ್ಕೋಡ್ ಮಯಿಲಾಡತ್ತಡ ನಿವಾಸಿ ರಂಶಾದ್ ಕೆ.ಎಲ್. (೩೯) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಇವರ ಕೈಯಿಂದ ೦.೬೧೮ ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಕಣ್ಣೂರು ರೂಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಲತ ನೇತೃತ್ವದ ಡಾನ್ಸಪ್ ಸ್ಕ್ವಾಡ್, ತಳಿಪರಂಬ ಡಿವೈಎಸ್ಪಿ ಪಿ. ಬಾಲಕೃಷ್ಣನ್ ನಾಯರ್, ಇನ್ಸ್‌ಪೆಕ್ಟರ್ ಕೆ.ಪಿ. ಶೈನ್ ಎಂಬಿವರ ನೇತೃತ್ವದಲ್ಲಿ ಈ ಮೂವರು ಮಂದಿ ಆರೋಪಿಗಳನ್ನು ಸೆರೆ ಹಿಡಿಯ ಲಾಗಿದೆ. ಪೊಲೀಸ್ ತಂಡ ಬಾವುಪರಂಬ ಜಂಕ್ಷನ್‌ನಲ್ಲಿ ನಿನ್ನೆ ರಾತ್ರಿ ವಾಹನ ತಪಾಸಣೆ ನಡೆಸುತ್ತಿದ್ದಂತೆ ಆಗಮಿಸಿದ ಕಾರನ್ನು ತಪಾಸಣೆ ನಡೆಸಿದಾಗ ಅದರಲ್ಲಿ ಮಾದಕ ವಸ್ತು ಪತ್ತೆಯಾಗಿದೆ. ಬಂಧಿತರನ್ನು ತನಿಖೆಗೊಳಪಡಿಸಲಾಗುತಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page