ಕಾಸರಗೋಡು: ಜಿಲ್ಲೆಯ ಐದು ವಿಧಾನಸಭಾ ಮಂಡಲಗಳ ಮತದಾರರ ಯಾದಿ ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 11,12,316 ಮಂದಿ ಯಾದಿಯಲ್ಲಿ ಸೇರಿದ್ದಾರೆ. ಮಂಡಲಗಳ ಕರಡು ಮತದಾರರ ಯಾದಿಯನ್ನು ಮುಖ್ಯ ಚುನಾವಣಾ ಅಧಿಕಾರಿ ಪ್ರಕಟಿಸಿದ್ದಾರೆ. ಒಟ್ಟು 5,49,034 ಪುರುಷರು, 5,63,272 ಮಹಿಳೆಯರು, 10 ಟ್ರಾನ್ಸ್ ಜಂಡರ್ಗಳು ಯಾದಿಯಲ್ಲಿ ಒಳಗೊಂಡಿದ್ದಾರೆ.
ಮಂಜೇಶ್ವರ ಮಂಡಲದಲ್ಲಿ ಅತ್ಯಂತ ಹೆಚ್ಚು ಮತದಾರರಿದ್ದಾರೆ. 2,32,256 ಇಲ್ಲಿನ ಮತದಾರರು. ಉದುಮದಲ್ಲಿ 2,30,156, ಕಾಞಂಗಾಡ್ನಲ್ಲಿ 2,25,875, ಕಾಸರಗೋಡಿನಲ್ಲಿ 2,12,456, ತೃಕರಿಪುರದಲ್ಲಿ 2,11,573 ಮಂದಿ ಯಾದಿಯಲ್ಲಿ ಸೇರಿದವರಾಗಿದ್ದಾರೆ. ಕರಡು ಯಾದಿ ಸಂಬAಧಿಸಿದ ವಿರೋಧಗಳಿದ್ದಲ್ಲಿ 12ರಿಂದ ಡಿಸೆಂಬರ್ 11ರವರೆಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಇವುಗಳಲ್ಲಿ ಡಿಸೆಂಬರ್ 28ರ ಮುಂಚಿತ ತೀರ್ಪು ಕಲ್ಪಿಸಲಾಗುವುದು. 2027 ಜನವರಿ 4ರಂದು ಅಂತಿಮ ಮತದಾರರ ಯಾದಿ ಪ್ರಕಟಿಸಲಾಗುವುದು.
ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್ ಮಂಡಲಗಳ ಇಲೆಕ್ಟ್ರರಲ್ ರಿಜಿಸ್ಟ್ರೇಶನ್ ಆಫೀಸರ್ಗಳಿಗೆ ಕರಡು ಯಾದಿಯನ್ನು ಹಸ್ತಾಂತರಿಸಿದರು. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೂ ಯಾದಿ ಲಭ್ಯಗೊಳಿಸಲಾಗುವುದು. ಮಂಜೇಶ್ವರ ಮಂಡಲದ ಕರಡು ಯಾದಿ ಎಡಿಎಂ ಪಿ. ಉದಯ ಕುಮಾರ್ ಸ್ವೀಕರಿಸಿದರು. ಕಂದಾಯ ರಿಕವರಿ ಡೆಪ್ಯುಟಿ ಕಲೆಕ್ಟರ್ ಎಸ್. ಶ್ರೀಜಿತ್, ಲ್ಯಾಂಡ್ ರೆವೆನ್ಯೂ ಡೆಪ್ಯುಟಿ ಕಲೆಕ್ಟರ್ಗಳಾದ ಪಿ.ವಿ. ಮುರಳಿ, ಬಿ.ಸಿ. ಬಿಜೇಶ್, ಆರ್ಡಿಒಗಳಾದ ಪಿ. ಸುಧೀಪ್, ಎಂ.ಎಸ್. ವಿಜು ಕುಮಾರ್ ಎಂಬಿವರು ಯಥಾ ಕ್ರಮ ತೃಕರಿಪುರ, ಮಂಜೇಶ್ವರ, ಉದುಮ, ಕಾಞಂಗಾಡ್, ಕಾಸರಗೋಡು ಮಂಡಲಗಳ ಇಲೆಕ್ಟ್ರರಲ್ ರಿಜಿಸ್ಟ್ರೇಶನ್ ಅಧಿಕಾರಿಗಳಾಗಿದ್ದಾರೆ.







