ಮಂಜೇಶ್ವರ: ಪೊಸೋಟ್ನ ಮನೆಯೊಂದರ ಸ್ನಾನದ ಕೊಠಡಿಯಲ್ಲಿ ಗೃಹಿಣಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಬ್ದುಲ್ ರಜಾಕ್ರ ಪತ್ನಿ ಆಸ್ಮ (48) ಮೃತಪಟ್ಟವರು. ನಿನ್ನೆ ಮಧ್ಯಾಹ್ನ 12 ಗಂಟೆ ವೇಳೆ ಮನೆಯ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇವರನ್ನು ಮನೆ ಮಂದಿ ಪತ್ತೆಹಚ್ಚಿದ್ದಾರೆ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ನಡೆಸಲಾಗಿದೆ. ಮೃತರು ಪತಿ, ಮಕ್ಕಳಾದ ರಾಶಿದ್, ಮೊಹಮ್ಮದ್ ರಾಫಿ, ಸಲ್ಮ, ಮೂಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







